Connect with us

  DAKSHINA KANNADA

  ಪುತ್ತೂರು – ಶಾಲಾ ಕಟ್ಟಡ ವಿಚಾರದಲ್ಲಿ ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶಾಸಕರ ನಡುವೆ ತಿಕ್ಕಾಟ

  ಪುತ್ತೂರು ಫೆಬ್ರವರಿ 21: ಪುತ್ತೂರಿನ 158 ವರ್ಷ ಇತಿಹಾಸವಿರುವ ಶಾಲೆಯಲ್ಲಿ ಇದೀಗ ಕಟ್ಟಡದ ವಿಚಾರದಲ್ಲಿ ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶಾಸಕರ ನಡುವೆ ತಿಕ್ಕಾಟ ಪ್ರಾರಂಭವಾಗಿದೆ.


  ಪುತ್ತೂರು ನಗರದ ಹೃದಯ ಭಾಗದಲ್ಲಿರುವ ಸರಕಾರಿ ಶಾಲೆಯಲ್ಲಿ ಶಾಲೆಯ ಜಾಗದಲ್ಲಿ ವಿಶೇಷ ಚೇತನದ ಮಕ್ಕಳಿಗಾಗಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲು ನಿರ್ಧರಿಸಲಾಗಿತ್ತು. ಈ ವೇಳೆ ಕಟ್ಟಡವನ್ನು ರಸ್ತೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ಕಟ್ಟುವಂತೆ ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ಮನವಿ ಮಾಡಿದ್ದರು. ಆದರೆ ಆದರೆ ಮನವಿಯನ್ನು ತಿರಸ್ಕರಿಸಿದ ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಶಾಲೆಯ ಆವರಣದ ಒಳಗೆ ಕಟ್ಟಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ.


  ಸುಮಾರು 3 ಎಕರೆ ವಿಸ್ತೀರ್ಣವಿರುವ ಶಾಲೆ ಇದಾಗಿದ್ದು. ಇಲ್ಲಿ ತರಗತಿಗಳ ಕೊಠಡಿಗಳು ಅಸ್ತವ್ಯಸ್ತವಾಗಿವೆ. ಒಂದು ಕಡೆ ತರಗತಿ, ಇನ್ನೊಂದು ಕಡೆ ಅಕ್ಷರ ದಾಸೋಹ ಕೊಠಡಿ, ಇನ್ನೊಂದೆಡೆ ನಲಿಕಲಿ ತರಗತಿ, ಮತ್ತೊಂದೆಡೆ ಸಾರ್ಟ್ ಕ್ಲಾಸ್, ಇದರ ಜೊತೆಗೆ ಶಾಲೆಯ ಆವರಣದೊಳಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಇನ್ನೊಂದು ಪಕ್ಕದಲ್ಲಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ ಇದೆ. ಇದರಿಂದಾಗಿ ತರಗತಿ ಸಮಯದಲ್ಲಿ ಶಾಲೆಯ ಆವರಣದಲ್ಲಿ ವಾಹನಗಳು ಯಾವಗಲೂ ಸಂಚರಿಸುತ್ತಲೇ ಇರುತ್ತವೆ. ಇಲ್ಲಿ ಮಕ್ಕಳಿಗೆ ಬೇಕಾದ ಸರಿಯಾದ ಆಟದ ಮೈದಾನದ ಕೊರತೆ ಇದ್ದು, ಆಟವಾಡುವ ಮಕ್ಕಳ ಮಧ್ಯೆ ವಾಹನಗಳು ಸಂಚರಿಸುತ್ತಿರುತ್ತವೆ. ಈ ಎಲ್ಲಾ ಅವ್ಯವಸ್ಥೆಗಳ ನಡುವೆ ಇನ್ನೊಂದು ಕಛೇರಿ ಆರಂಭದ ಪ್ರಯತ್ನಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

  ಈ ನಡುವೆ ವಿರೋಧ ಮಾಡಲು ಬಂದ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ವಿರುದ್ಧ ಅಧಿಕಾರಿಗಳು ತಿರುಗಿ ಬಿದ್ದಿದ್ದು, ಎಲ್ಲರ ವಿಡಿಯೋ ಮಾಡಿ ಬಂಧಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿಯ ವರ್ತನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply