LATEST NEWS
ಹೊಟೇಲಿಗೆ ಕಲ್ಲು ತೂರಿದ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತನ ಬಂಧನ

ಹೊಟೇಲಿಗೆ ಕಲ್ಲು ತೂರಿದ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತನ ಬಂಧನ
ಮಂಗಳೂರು, ಸೆಪ್ಟೆಂಬರ್ 11: ಭಾರತ್ ಬಂದ್ ವೇಳೆ ಮಂಗಳೂರಿನಲ್ಲಿ ಹೊಟೇಲಿಗೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳೂರಿನ ಕದ್ರಿ ಪೊಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಅಮರ್ ಸೋನ್ಸ್ ಎಂದು ಗುರುತ್ತಿಸಲಾಗಿದ್ದು, ಸುರತ್ಕಲ್ ನಿವಾಸಿಯಾಗಿರುವ ಈತ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರ ಆಪ್ತ ಎಂದು ತಿಳಿದು ಬಂದಿದೆ.

ನಿನ್ನೆ ಬೆಳಗ್ಗೆ ಭಾರತ್ ಬಂದ್ ವೇಳೆ ಈತ ಹೆಲ್ಮೆಟ್ ಧರಿಸಿ ಮಗಳೂರು ನಗರದ ಶಿವಭಾಗ್ ನಲ್ಲಿ ಹೊಟೇಲಿಗೆ ಕಲ್ಲೆಸೆದು ಪರಾರಿಯಾಗಿದ್ದ.
ಈ ಸಂದರ್ಭದಲ್ಲಿ ಹೆಲ್ಮೆಟ್ ಧಾರಿಯಾಗಿದ್ದ ಈತ ಸಿಸಿಟಿವಿಯಲ್ಲಿ ಸೆರೆಯಾಗಿದ್ದ.
ಕಲ್ಲೆಸದಿಂದ ಹೊಟೇಲ್ ಸಿಬಂದಿ ಕೂಡ ಗಾಯಗೊಂಡಿದ್ದ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ದ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.