KARNATAKA
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾಲಿಬಾನ್ ಸಂಘಟನೆ ನಾಯಕರಂತೆ ಮಾತನಾಡುತ್ತಿದ್ದಾರೆ – ಕಾಂಗ್ರೇಸ್

ಬೆಂಗಳೂರು ಅಕ್ಟೋಬರ್ 14: ಮಂಗಳೂರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಅವರು ತಾಲಿಬಾನ್ ಸಂಘಟನೆಯ ನಾಯಕರಂತೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷವು, ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸಿದ ಮುಖ್ಯಮಂತ್ರಿ @BSBommai ಅವರು ತಾಲಿಬಾನ್ ಸಂಘಟನೆಯ ನಾಯಕರಂತೆ ಮಾತಾಡಿದ್ದಾರೆ.

ಬಿಜೆಪಿಯ ಆಡಳಿತಕ್ಕೆ ಸಾಮಾಜಿಕ ಭಾವನೆಗಳೇ ಆಧಾರ ಎಂದಾದರೆ ದೇವದಾಸಿ ಪದ್ಧತಿ, ಅಸ್ಪೃಶ್ಯತೆಯ ಆಚರಣೆ, ಬೆತ್ತಲೆ ಸೇವೆಯಂತಹ ಸಾಮಾಜಿಕ ಆಚರಣೆಗಳ ಹಿಂದಿದ್ದ ‘ಭಾವನೆ’ಗಳನ್ನು ಪುರಸ್ಕರಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದೆ.