DAKSHINA KANNADA
ರಾಹುಲ್ ಗಾಂಧಿ ಆಗಮನದಿಂದ ರಮಾನಾಥ ರೈ ಸೋಲು ನಿಶ್ಚಯವಾಗಿದೆ- ಹರಿಕೃಷ್ಣ ಬಂಟ್ವಾಳ
ರಾಹುಲ್ ಗಾಂಧಿ ಆಗಮನದಿಂದ ರಮಾನಾಥ ರೈ ಸೋಲು ನಿಶ್ಚಯವಾಗಿದೆ- ಹರಿಕೃಷ್ಣ ಬಂಟ್ವಾಳ
ಮಂಗಳೂರು ಎಪ್ರಿಲ್ 28: ರಾಹುಲ್ ಗಾಂಧಿ ಬಂದಾಗಲೇ ರಮಾನಾಥ ರೈ ಸೋಲು ನಿಶ್ಚಯವಾಗಿದೆ. ರಾಹುಲ್ ಜಿಲ್ಲೆಗೆ ಭೇಟಿ ನೀಡಿದ್ದು ಶನೇಶ್ವರ ಬಂದಹಾಗೆ ಆಗಿದ್ದು, ರಮನಾಥ ರೈ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು,
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಮಾನಾಥ ರೈ ಅವರು ಸೋಲುವ ಭೀತಿಯಿಂದಾಗಿ ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಎಸ್ ಡಿಪಿಐ ಜೊತೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ಜಿಲ್ಲೆ ಹತ್ಯೆ ಮುಕ್ತ, ಭಯ ಮುಕ್ತ ಜಿಲ್ಲೆಯಾಗಬೇಕಾದಲ್ಲಿ ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಹೊರಬನ್ನಿ ಎಂದು ಕರೆ ನೀಡಿ ಅವರು ನಮ್ಮ ದೇಶ ಅಂಬೇಡ್ಕರ ರಚಿತ ಸಂವಿಧಾನದಿಂದ ರಚಿತವಾಗಿದ್ದು, ಭಗವದ್ಗೀತೆ,ಖುರಾನ್, ಬೈಬಲ್,ತ್ರಿಪಿಟಿಕಾ ಆಧಾರದ ಮೇಲೆ ದೇಶ ರಚನೆ ಆಗಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್, ರಮಾನಾಥ ರೈ ಅಧಿಕಾರದಲ್ಲಿರುವವರೆಗೂ ಜಿಲ್ಲೆಯಲ್ಲಿ ಸೌಹಾರ್ದತೆ ಸಾಧ್ಯವಿಲ್ಲ, ಬಂಟ್ವಾಳದಲ್ಲಿ ರಮಾನಾಥ ರೈ ನೂರಕ್ಕೆ ನೂರು ಸೋಲುತ್ತಾರೆ ಇದಕ್ಕೆ ಸಾಕ್ಷಿ ರಾಹುಲ್ ಗಾಂಧಿ ಬಂಟ್ವಾಳಕ್ಕೆ ಭೇಟಿ ನೀಡಿದ್ದು ಎಂದು ಹೇಳಿದ ಹರಿಕೃಷ್ಣ ಬಂಟ್ವಾಳ ರಾಹುಲ್ ಎಲ್ಲೆಲ್ಲಿ ಭೇಟಿ ನೀಡಿದ್ದಾರೆ ಅಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸವಿಲ್ಲ ಎಂದರು.
ಪಕ್ಷದಲ್ಲಿ ಈ ಬಾರಿ ಬಿಲ್ಲವರಿಗೆ ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಮಾತನಾಡಿದ ಹರಿಕೃಷ್ಣ ಬಂಟ್ವಾಳ, ಬಿಲ್ಲವರು ನಿಷ್ಠಾವಂತರೇ ಹೊರತು ಜಾತಿವಾದಿಗಳಲ್ಲ, ಒಂದು ವೇಳೆ ಜಾತಿವಾದಿಗಳಾಗುತ್ತಿದ್ದರೆ ಜನಾರ್ದನ ಪೂಜಾರಿ ಸೋಲಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರು. ಬಿಜೆಪಿ ಮೇಲೆ ಆರೋಪ ಮಾಡುವ ಕಾಂಗ್ರೆಸ್ ಬಿಲ್ಲವರಿಗೆ ಎಷ್ಟು ಪ್ರಾಮುಖ್ಯತೆ ನೀಡಿದೆ ? ಎಂದು ಕೇಳಿದ ಅವರು, ರೈ ಗೆದ್ದಲ್ಲಿ ಜನಾರ್ದನ ಪೂಜಾರಿ ಮನೆಯಲ್ಲಿ ಊಟ ಹಾಕುತ್ತೇನೆಂಬ ಹೇಳಿಕೆ ವಿಚಾರ, ಈ ಬಾರಿಯ ಚುನಾವಣೆಯಲ್ಲಿ ರೈ ಸೋಲು ಖಚಿತವಾಗಿದೆ, ರೈಗಾಗಿ ಜನಾರ್ದನ ಪೂಜಾರಿ ಮನೆಯಲ್ಲಿ ಊಟ ಹಾಕುವ ಅವಕಾಶವೇ ಬರೋದಿಲ್ಲ ಎಂದರು.