LATEST NEWS
ನಾನು ವಾಟ್ಸಪ್ ವಿವಿ ಸ್ಟೂಡೆಂಟ್ ಅಲ್ಲ – ವಾಟ್ಸ್ ಆಪ್ ಯುನಿವರ್ಸಿಟಿಯಲ್ಲಿ ರಾಜಿನಾಮೆ ಕೊಡಿ ಎಂದ ಕೂಡಲೇ ರಾಜೀನಾಮೆ ಕೊಡಲ್ಲ -ಹರೀಶ್ ಕುಮಾರ್

ಮಂಗಳೂರು ಜೂನ್ 07: ನಾನು ವಾಟ್ಸಪ್ ವಿವಿ ಸ್ಟೂಡೆಂಟ್ ಅಲ್ಲ ಕಾಂಗ್ರೇಸ್ ಪಕ್ಷದ ಸ್ಟೂಡೆಂಟ್ ವಾಟ್ಸ್ ಆಪ್ ಯುನಿವರ್ಸಿಟಿಯಲ್ಲಿರಾಜಿನಾಮೆ ಕೊಡಿ ಎಂದ ಕೂಡಲೇ ರಾಜೀನಾಮೆ ಕೊಡುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಲೋಕಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸೋತಿದೆ ಎಂದು ನಾನು ರಾಜೀನಾಮೆ ನೀಡುವುದಿಲ್ಲ. ರಾಜಿನಾಮೆ ಮಾರ್ಕೆಟ್ ನಲ್ಲಿ ಸಿಗುವ ವಸ್ತು ಅಲ್ಲ. ಪಕ್ಷದ ಜಿಲ್ಲಾ ಮುಖಂಡರು, ಚುನಾವಣೆಗೆ ಸ್ಪರ್ಧಿಸಿದವರು, ಜವಾಬ್ದಾರಿಯುತ ವ್ಯಕ್ತಿಗಳು ರಾಜಿನಾಮೆ ಕೇಳಿದರೆ ಪರಿಶೀಲನೆ ನಡೆಸಬಹುದು ಎಂದರು. ಗೆದ್ದರೆ ನನ್ನ ಗೆಲವು ಎಂದು ಹೇಳುತ್ತಾರೆ. ಸೋತರೆ ಬೇರೆಯವರ ಮೇಲೆ ಬೆರಳು ತೋರಿಸುತ್ತಾರೆ. ರಾಜಿನಾಮೆ ನೀಡಬೇಕು ಎಂದು ಪಕ್ಷ ಹೇಳಿದರೆ ಅಗ ರಾಜಿನಾಮೆ ನೀಡಿ ಪಕ್ಷ ಸದೃಢಗೊಳಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆಯನ್ನು ಪದ್ಮರಾಜ್ ಅವರು ಹೊರುತ್ತೇನೆ ಎಂದಿದ್ದಾರೆ. ಸೋಲಿಗೆ ಅವರೊಬ್ಬರೇ ಜವಾಬ್ದಾರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದ್ದೆವು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಮ್ಮ ಅಭ್ಯರ್ಥಿಗೆ ಅಧಿಕ ಮತ ದೊರಕಿದೆ. ಆದರೂ ಸೋಲು-ಸೋಲೇ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುತ್ತೇವೆ ಎಂದು ತಿಳಿಸಿದರು.