Connect with us

    BANTWAL

    ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ : ನಳಿನ್ ಕುಮಾರ್ ಕಟೀಲ್ ಆರೋಪ

    ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಸರಕಾರ ಬೆಂಬಲವಾಗಿ ನಿಂತಿದೆ. ಸಿದ್ದರಾಮಣ್ಣ ಬೆಂಬಲವಾಗಿ ನಿಂತಿದ್ದಾರೆ. ಆ ಕಾರಣಕ್ಕಾಗಿ ಗಲಭೆಗಳು ಸೃಷ್ಟೀಯಾಗ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ರವರು ಆರೋಪಿಸಿದ್ದಾರೆ.

    ವಿಟ್ಲ : ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಸರಕಾರ ಬೆಂಬಲವಾಗಿ ನಿಂತಿದೆ. ಸಿದ್ದರಾಮಣ್ಣ ಬೆಂಬಲವಾಗಿ ನಿಂತಿದ್ದಾರೆ. ಆ ಕಾರಣಕ್ಕಾಗಿ ಗಲಭೆಗಳು ಸೃಷ್ಟೀಯಾಗ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ರವರು ಆರೋಪಿಸಿದ್ದಾರೆ.

    ಈ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ.

    ಹಿಂದೂ ಸಮಾಜವನ್ನು ಸಂರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದ್ದು, ಹಿಂದೂ ವಿರೋಧಿಯಾಗಿ ಕೆಲಸಮಾಡುತ್ತಿದೆ.

    ಸಿದ್ದರಾಮಣ್ಣನ ಆಡಳಿತ ಹಿಂದೂ ವಿರೋಧಿ ಆಡಳಿತವಾಗಿದೆ ಎಂದು ವಿಟ್ಲದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಟೀಲ್ ಇವತ್ತು ಮತಾಂಧ ಶಕ್ತಿಗಳು, ಆತಂಕವಾದಿಗಳು, ನಿರಾತಂಕವಾದಿಗಳು ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಕೋಲಾರದಲ್ಲಿ ಈದ್ ಮಿಲಾದ್ ನ ಹೆಸರಿನಲ್ಲಿ ಕತ್ತಿಯ ಪ್ರದರ್ಶನ, ಔರಂಗಜೇಬನ ಕಟೌಟ್ ನ ಮುಖಾಂತರ, ಟಿಪ್ಪುವಿನ ಕಟೌಟ್ ನ ಮುಖಾಂತರ ಕೋಲಾರದಲ್ಲಿ ಅಶಾಂತಿಯನ್ನು ನಿರ್ಮಾಣಮಾಡುವ ಪ್ರಯತ್ನ ನಡೆದಿದೆ.

    ಶಿವಮೊಗ್ಗದಲ್ಲಿ ಈದ್ ಮಿಲಾದ್ ನ ಹೆಸರಿನಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲುತೂರಾಟ ನಡೆಸಿರುವ ಗಂಭೀರ ಪ್ರಕರಣಗಳನ್ನು ನಾವು ಕಂಡಿದ್ದೇವೆ.

    ಯಾವ್ಯಾವಾಗ ಸಿದ್ದರಾಮಣ್ಣ ನೇತೃತ್ವದ ಕಾಂಗ್ರೆಸ್ ಆಡಳಿತ ಈ ರಾಜ್ಯದಲ್ಲಿ ಬರುತ್ತಾ ಅವಾಗ ಗಲಭೆ ಸೃಷ್ಟಿ ಮಾಡುವಂತಹ, ಗಲಭೆ ಕೋರರಿಗೆ ಶಕ್ತಿ ತುಂಬುವ ಕೆಲಸ ಈ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ನ ಮೊದಲ ಅವಧಿಕಾಲದಲ್ಲಿ ಟಿಪ್ಪು ಸುಲ್ತಾನ್ ಮೆರೆಯುವಂತಾಯಿತು.

    ಈಗ ಎರಡನೇ ಅವಧಿಯಲ್ಲಿ ಔರಂಗಜೇಬನನ್ನು ಪ್ರದರ್ಶನ ಮಾಡುವ ಕೆಲಸವಾಗಿದೆ. ಅವರ ಸಂಕೇತ ಟಿಪ್ಪು ಅಥವಾ ಔರಂಗಜೇಬ ಅಲ್ಲ. ಅದರ ಹಿಂದೆ ಬಯೋತ್ಪಾದನಾ ಚಟುವಟಿಕೆ ನಡೆಯುತ್ತಿದ್ದಾವೆ.

    ಇವತ್ತು ಕಾಂಗ್ರೆಸ್ ಆಡಳಿತದಲ್ಲಿ ತೀರ್ಥಹಳ್ಳಿ ಪ್ರದರ್ಶನ ಬಯೋತ್ಪಾದನಾ ಚಟುವಟಿಕೆಗಳು ಪ್ರಾರಂಭವಾಗುತ್ತಿದೆ.

    ಹರ್ಷಾ, ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಎನ್.ಐ.ಎ ತನಿಖೆಗಳು ತೀವ್ರಗೊಳಿಸಿದ ಮೇಲೆ ಶಿವಮೊಗ್ಗದ ತೀರ್ಥಹಳ್ಳಿ ಭಯೋತ್ಪಾದನಾ ಕೇಂದ್ರವಾಗ್ತಿದೆ ಎನ್ನುವುದನ್ನು ಎನ್.ಐ.ಎ. ಹೇಳಿದೆ.

    ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ನಲ್ಲಿ ತೀರ್ಥಹಳ್ಳಿಯ ಬಯೋತ್ಪಾದಕರ ಚಟುವಟಿಕೆಗಳು ಸ್ಪಷ್ಟವಾಗಿ ಗೋಚರಿಸಿದೆ.

    ಯಾವ್ಯಾವಾಗ ಕಾಂಗ್ರೆಸ್ ಆಡಳಿತಕ್ಕೆ ಬರುತ್ತದಾ, ಸಿದ್ದರಾಮಣ್ಣ ಮುಖ್ಯಮಂತ್ರಿ ಆಗ್ತಾರಾ ಆಗ ಆತಂಕವಾದಿಗಳಿಗೆ ಬಯೋತ್ಪಾದಕರಿಗೆ ಯಾಕೆ ಶಕ್ತಿ ಬರುತ್ತದೆ ಎಂದವರು ಪ್ರಶ್ನಿಸಿದರು.

    ಡಿಜೆಹಳ್ಳಿ ಕೆಜೆಹಳ್ಳಿ ಪ್ರಕರಣಗಳಿರಬಹುದು ಆಗ ಆರೋಪಿಗಳನ್ನ ನಮ್ಮ ಸರಕಾರ ಬಂಧನ ಮಾಡಿತ್ತು.

    ಅವರನ್ನು ಬಿಡುಗಡೆ ಮಾಡುವ ಕೆಲಸವನ್ನು ಈ ಸರಕಾರ ಮಾಡ್ತಿದೆ. ಕೋಲಾರದಲ್ಲಿ ನಡೆದ ಘಟನೆಯ ಬಗ್ಗೆ ಕಠೋರ ಕ್ರಮ ಕೈಗೊಳ್ಳದೆ ಇರುವುದರಿಂದ ಆತಂಕವಾದಿಗಳು ನಿರಾತಂಕವಾಗಿ ಈ ರಾಜ್ಯದಲ್ಲಿ ಮರೆಯುತ್ತಿದ್ದಾರೆ.

    ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿವಸ ಅವರ ವಿಜಯೋತ್ಸವದ ಹೆಸರಿನಲ್ಲಿ ಮೆರವಣಿಗೆ ನಡೆದಂತಹ ಸಂದರ್ಭದಲ್ಲಿ ಪಾಕಿಸ್ತಾನದ ಪರ ಗೋಷಣೆಗಳನ್ನು ಹಾಕಲಾಗಿತ್ತು,

    ಪಾಕಿಸ್ತಾನದ ದ್ವಜವನ್ನು ಹಿಡಿದು ಪ್ರದರ್ಶಿಸುವ ಕೆಲಸವಾಗಿದೆ. ರಾಷ್ಟ್ರ ವಿರೋಧಿ ಕೃತ್ಯ ಮಾಡಿದವರನ್ನು ಬಂಧಿಸುವ ಶಕ್ತಿ ಕಾಂಗ್ರೆಸ್ ಸರಕಾರಕ್ಕಿಲ್ಲ. ತುಷ್ಟೀಕರಣದ ನೀತಿಯಿಂದ ಅವರನ್ನು ಬಿಟ್ಟರು ಆ ಕಾರಣಕ್ಕಾಗಿ ಇಡೀ ರಾಜ್ಯದಲ್ಲಿ ಗಲಭೆ ಸೃಷ್ಠಿಸುವ ಹುನ್ನಾರ ನಡೆಯುತ್ತಿದೆ.

    ಶಿವಮೊಗ್ಗದಲ್ಲಿ ಗಲಭೆ ನಡೆದ ಪ್ರದೇಶಗಳಿಗೆ ನಮ್ಮ ತಂಡ ತೆರಳಿ ಪರಿಶೀಲನೆ ನಡೆಸಲಿದೆ.

    ಶಿವಮೊಗ್ಗ ಹಾಗೂ ಕೋಲಾರದ ಗಲಭೆಯ ಹಿಂದಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕೂಡಲೇ ತನಿಖೆಯನ್ನು ಎನ್.ಐ.ಎ. ಗೆ ಒಪ್ಪಿಸಬೇಕು ಎಂದರು.

    ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು, ಪ್ರಮುಖರಾದ ಮಾಧವ ಮಾವೆ, ರವೀಶ್ ಶೆಟ್ಟಿ ಕರ್ಕಳ, ಹರಿಪ್ರಸಾದ್ ಯಾದವ್, ರಾಮ್ ದಾಸ್ ಶೆನೈ, ಮೊಹನದಾಸ್ ಉಕ್ಕುಡ, ವೀರಪ್ಪ ಗೌಡ ರಾಯರಬೆಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ಹರೀಶ್ ಸಿ.ಹೆಚ್., ಜಯಂತ ಸಿ.ಹೆಚ್, ವಿಟ್ಲ ಪಡ್ನೂರು ಗ್ರಾ.ಪಂ ಅಧ್ಯಕ್ಷ ಜಯಂತ ಪಿ. ಮೊದಲಾದವರು ಉಪಸ್ಥಿತರಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply