BANTWAL
ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ : ಲಾಠಿ ಚಾರ್ಜ್

ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ : ಲಾಠಿ ಚಾರ್ಜ್
ಬಂಟ್ವಾಳ, ಅಕ್ಟೋಬರ್ 22 : ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನಾರಿಕರಾಗಿ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಿನಿ ವಿಧಾನ ಸೌಧದ ಮುಖ್ಯ ದ್ವಾರವನ್ನು ಒಡೆದು ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ 252 ಕೋಟಿ ರೂಪಾಯಿಗಳ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.


ಹಾನಿಗೊಂಡ ಪ್ರಮುಖ ದ್ವಾರ
ಇದರ ಅಂಗವಾಗಿ ಮಿನಿ ವಿಧಾನ ಸೌಧವನ್ನು ಲೋಕಾರ್ಪಣೆಯನ್ನು ಮಾಡಲು ಸಿಎಂ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಅನಾಗರಿಕತೆ ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಟ ನಡೆಸಿದ ಪರಿಣಾಮ ನೂತನ ಮಿನಿ ವಿಧಾನ ಸೌಧದ ಬಾಗಿಲು ತುಂಡರಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಮೇಲ್ ಉಸ್ತುವಾರಿ ನೋಡುತ್ತಿದ್ದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಯನ್ನೂ ತಳ್ಳಾಟದಲ್ಲಿ ದೂಡಿ ಹಾಕಿದ್ದಾರೆ. ಕಾರ್ಯಕರ್ತರ ನಿಯಂತ್ರಿಸಲು ಪೋಲಿಸರು ಲಾಠಿ ರುಚಿ ತೋರಿಸಿದ್ದಾರೆ.