Connect with us

    LATEST NEWS

    ಕಾಂಗ್ರೆಸ್ ಭಿನ್ನಮತ ಸ್ಪೋಟ : CM ಸಮ್ಮುಖದಲ್ಲಿ ಪರಸ್ಪರ ತಳ್ಳಾಡಿದ ಜೈನ್ ಮತ್ತು ಐವನ್

    ಕಾಂಗ್ರೆಸ್ ಭಿನ್ನಮತ ಸ್ಪೋಟ : CM ಸಮ್ಮುಖದಲ್ಲಿ ಪರಸ್ಪರ ತಳ್ಳಾಡಿದ  ಜೈನ್ ಮತ್ತು ಐವನ್

    ಮಂಗಳೂರು, ಅಕ್ಟೋಬರ್ 22 : ಮಂಗಳೂರು ಕಾಂಗ್ರೆಸ್ ಭಿನ್ನಮತ ಸ್ಪೋಟಗೊಂಡಿದೆ. ಕಾಂಗ್ರೆಸ್ ನಾಯಕ ಹಾಗೂ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಮತ್ತು ಅಭಯಚಂದ್ರ ಜೈನ್ ನಡುವೆ ಭಿನ್ನಮತ ಸ್ಪೋಟಗೊಂಡಿದೆ.

    ಅದೂ ಸಿ ಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ. ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಮುಖ್ಯಮಂತ್ರಿ ಪಕ್ಕ ನಿಲ್ಲಲು ಇಬ್ಬರು ನಾಯಕರು ಪೈಪೋಟಿ ನಡೆಸಿದರು. ಈ ಸಂದರ್ಭದಲ್ಲಿ ಐವನ್ ಡಿ ಸೋಜಾ ಅವರನ್ನು ಅಭಯಚಂದ್ರ ಜೈನ್ ತಳ್ಳಿದ್ದಾರೆ.

    ಮೂಡಬಿದ್ರೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಟಿಕೆಟ್ ಅಕಾಂಕ್ಷಿಯಾಗಿರುವ ಐವಾನ್ ಡಿಸೋಜಾ ಅವರು ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.

    ಮತ್ತೊಂದು ಕಡೆ ಈ ಕ್ಷೇತ್ರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ತನ್ನ ಬದಲಿಗೆ ಕಣಕ್ಕೆ ಇಳಿಸಲು ಹಾಲಿ ಶಾಸಕ ಅಭಯಚಂದ್ರ ಜೈನ್ ಚಿಂತನೆ ನಡೆಸಿದ್ದರು.

    ಈ ಹಿನ್ನೆಲೆಯಲ್ಲಿ ಮಿಥುನ್ ಅವರ ಹೆಸರನ್ನು ಮುಖ್ಯಮಂತ್ರಿಗಳ ಈ  ಹಿಂದಿನ ಭೇಟಿಯಲ್ಲಿ ತೇಲಿಬಿಟ್ಟಿದ್ದಾರೆ.

    ಇದು ಉಭಯ ನಾಯಕರ ನಡುವೆ ಪರಸ್ಪರ ಭಿನ್ನಾಭಿಪ್ರಾಯ, ಪೈಪೋಟಿಗೆ ಕಾರಣವಾಗಿದೆ. ಈ ಪೈಪೋಟಿಯು ಇಂದಿನ ಭಿನ್ನಮತ ಸ್ಪೋಟದ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply