LATEST NEWS
ಪ್ರಧಾನಿ ವಿರುದ್ದ ಅವಹೇಳಕಾರಿ ಪದ ಬಳಕೆ : ಸಚಿವ ಬೇಗ್ ವಿರುದ್ದ ದೂರು ದಾಖಲು

ಪ್ರಧಾನಿ ವಿರುದ್ದ ಅವಹೇಳಕಾರಿ ಪದ ಬಳಕೆ : ಸಚಿವ ಬೇಗ್ ವಿರುದ್ದ ದೂರು ದಾಖಲು
ಪುತ್ತೂರು,ಅಕ್ಟೋಬರ್ 13 : ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಪದ ಬಳಕೆ ಮಾಡಿದನಗರಾಭೀವೃದ್ದಿ ಹಾಗೂ ಹಜ್ ಸಚಿವ ರೋಷನ್ ಬೇಗ್ ಅವರ ವಿರುದ್ದ ಪುತ್ತೂರಿನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ನಗರ ಪೋಲಿಸ್ ಠಾಣೆಗೆ ಈ ಸಂಬಂಧ ಲಿಖಿತ ದೂರನ್ನು ಸಲ್ಲಿಸಿದ್ದಾರೆ.
ಪೋಲಿಸ್ ಠಾಣೆಗೆ ನೀಡಿದ ದೂರಿನ ವಿವರ :
ಅರುಣ್ ಕುಮಾರ್ ಪುತ್ತಿಲ ಅವರು ಪೋಲಿಸ್ ಠಾಣೆಗೆ ನೀಡಿದ ಲಿಖಿತ ದೂರಿನ ವಿವರ ಹೀಗಿದೆ….
ಮಾನ್ಯ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ವಿರುದ್ದದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ,
ನಾನು ಭಾರತ ದೇಶದ ಪ್ರಜೆಯಾಗಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ಭಾರತದ ಅತ್ಯಂತ ಉನ್ನತ ಹುದ್ದೆಯಲ್ಲಿರುವ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ವಿರುದ್ದ ದಿನಾಂಕ 13- 10 -2017 ರಂದು ಬೆಂಗಳೂರಿನ ದೇವರ ಜೀವನ ಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಆರೋಪಿಯು ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸಮೂಹ ಮಾದ್ಯಮಗಳಲ್ಲಿ ವರದಿಯಾಗಿದೆ. ” ಬೋಲಿ ಮಗ ಸೂಳೆ ಮಗ ಮೋದಿ ಏನುಮಾಡ್ಬಿಟ್ಟ” ಎಂದು ಬಿಜೆಪಿ ಕಾರ್ಯಕರ್ತರೇ ನಿಂದಿಸುತ್ತಿದ್ದಾರೆ ಏಮದು ಆರೋಪಿಯು ಮಾಡಿರುವ ಭಾಷಣವು ದೇಶ ದ್ರೋಹದ ಕೃತ್ಯವಾಗಿದೆ. ಈ ರೀತಿಯ ಅಶ್ಲೀಲ ಶಬ್ದ ಪ್ರಯೋಗ ಮಾಡಿರುವುದು ಈ ದೇಶದ ಪ್ರಧಾನಿಗೆ ಮಾಡಿರುವುದು ನನ್ನಂತಹ ಪ್ರಜೆಗಳಿಗೆ ಭಾರಿ ಅಘಾತ ಉಂಟುಮಾಡಿದೆ. ಆದ್ದರಿಂದ ಆರೋಪಿಯನ್ನು ಬಂಧಿಸಿದ್ದು ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪ್ರಾರ್ಥನೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಸಚಿವ ರೋಷನ್ ಬೇಗ್ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದುಪರ ಸಂಘಟನೆಗಳ ಮುಖಂಡರುಗಳು ತೀರ್ಮಾನಿಸಿದ್ದಾರೆ.