Connect with us

LATEST NEWS

ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನ ಬಂಧನ

ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನ ಬಂಧನ
ಮಂಗಳೂರು, ಅಕ್ಟೋಬರ್ 13 : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಗರದ ಹೊರವಲಯದ ಜೋಕಟ್ಟೆ ನಿವಾಸಿ ಮಹಮ್ಮದ್ ಶಮೀರ್ ಅಲಿಯಾಸ್ ಡೆಡ್ಲಿ ಎಂಬಾತನನ್ನು ಪುತ್ತೂರು ಕಬಕ ಗ್ರಾಮದ ಕಲ್ಲಂತಡ್ಕದಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಯಾರು ಈ ಶಮೀರ್ ? :

ಮಹಮ್ಮದ್ ಶಮೀರ್  ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನಾಗಿ ಕೆಲಸ ಮಾಡುತ್ತಿದ್ದ. 
2013 ರಲ್ಲಿ ಪಣಂಬೂರು ಠಾಣೆಯಲ್ಲಿ ಮಹಮ್ಮದ್ ಶಮೀರ್ ವಿರುದ್ಧ ಹಫ್ತಾ ವಸೂಲಿ, ದರೋಡೆ, ಕೊಲೆ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿ ಮಹಮದ್ ಶಮೀರ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ಪಡೆದು ಹೊ ಬಂದ ಶಮೀರ್ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಈ ನಡುವೆ ತಲೆ ಮರೆಸಿ ತಪ್ಪಿಸಿಕೊಂಡಿದ್ದ ಶಮೀರ ಹಿಂದೆ ಪಣಂಬೂರು ಪೊಲೀಸರು ಬಿದ್ದಿದ್ದು, ಎಲ್ಲೆಡೆ ಶೋಧಕಾರ್ಯ ಆರಂಭಿಸಿದ್ದರು. ಆರೋಪಿ ಮಹಮ್ಮದ್ ಸಮೀರ್ ಪುತ್ತೂರಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪಡೆದ ಪಣಂಬೂರು ಪೊಲೀಸರು ರೌಡಿ ನಿಗ್ರಹ ದಳದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇದೀಗ ಕಾನೂನಿನ ಕೈಗಳಿಂದ ತಪ್ಪಿಸಿಕೊಂಡ ಶಮೀರ್ ಇದೀಗ ಮತ್ತೆ ಸರಳುಗಳ ಹಿಂದೆ ಬಿದ್ದಿದ್ದಾನೆ.

Facebook Comments

comments