LATEST NEWS
ಯಕ್ಷಗಾನದಲ್ಲಿ ಕ್ಷೌರಿಕ ವೃತ್ತಿ ಅವಹೇಳನ ಕಲಾವಿದನ ವಿರುದ್ದ ದೂರು

ಯಕ್ಷಗಾನದಲ್ಲಿ ಕ್ಷೌರಿಕ ವೃತ್ತಿ ಅವಹೇಳನ ಕಲಾವಿದನ ವಿರುದ್ದ ದೂರು
ಮಂಗಳೂರು ಜನವರಿ 7:ಮೂಡಬಿದ್ರೆ ಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದ ಕ್ಷೌರಿಕ ವೃತ್ತಿಯನ್ನು ಅವಹೇಳನ ಮಾಡಿದ್ದಾರೆ ಎಂದು ಉಡುಪಿ ಸವಿತಾ ಸಮಾಜ ಯಕ್ಷಗಾನ ಕಲಾವಿದನ ವಿರುದ್ದ ದೂರು ದಾಖಲು ಮಾಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದ ಮಹಾಕಲಿ ಮಗಧೇಂದ್ರ ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಕ್ಷೌರಿಕ ವೃತ್ತಿಯನ್ನು ಅವಹೇಳನ ಮಾಡಿದ್ದಾರೆ. ಈ ಅವಹೇಳನದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದಾಗಿ ಭಂಡಾರಿ ಸಮುದಾಯ ತೀವ್ರ ನೋವನ್ನು ಅನುಭವಿಸುತ್ತಿದೆ ಎಂದು ದೂರಲಾಗಿದೆ. ಈ ಹಿನ್ನಲೆಯಲ್ಲಿ ಉಡುಪಿ ಸವಿತಾ ಸಮಾಜ ಯಕ್ಷಗಾನ ಕಲಾವಿದ ದಿನೇಶ್ ಕಡಬರ ಮೇಲೆ ಪ್ರಕರಣ ದಾಖಲಿಸಿದ್ದು, ಆರೋಪಿ ವಿರುದ್ದ ಕ್ರಮಕ್ಕೆ ಆಗ್ರಹಿದ್ದಾರೆ.
