ಮೋದಿ ಶಾ ಕೊಲೆ ಬೆದರಿಕೆ ಒರ್ವನ ವಶಕ್ಕೆ ಪಡೆದ ವಿಟ್ಲ ಪೊಲೀಸರು

ಮಂಗಳೂರು ಜನವರಿ 7: ವಿದೇಶದಲ್ಲಿದ್ದು ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಒರ್ವ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಟ್ಲ ಪೆರುವಾಯಿ ಗ್ರಾಮದ ಸೇನೆರಪಾಲು ನಿವಾಸಿ ಅನ್ವರ್ ಬಂದಿತ ಆರೋಪಿಯಾಗಿದ್ದಾನೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಎಸ್.ಐ.ವಿನೋದ್ ಅವರ ತಂಡ ಅನ್ವರ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಅನ್ವರ್ ಅಲ್ಲಿದ್ದುಕೊಂಡೆ ಪೌರತ್ವ ಕಾಯಿದೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿ ಸಂದೇಶ ಗಳನ್ನು ರವಾನೆ ಮಾಡುತ್ತಿದ್ದ, ಜೊತೆಗೆ ಕೋಮು ಭಾವನೆ ಕೆರಳಿಸಿ ಸಂದೇಶ ಗಳನ್ನು ರವಾನಿಸುತ್ತಿದ್ದ. ಸಂದೇಶ ಕಳುಹಿಸಿದ ಬಳಿಕ ವಿದೇಶದಿಂದ ತವರೂರಿಗೆ ವಾಪಾಸಾದ ಅನ್ವರ್ ಅವರನ್ನು ದೂರಿನ ಮೇರೆಗೆ ಪೊಲಿಸರು ಬಂಧಿಸಿದ್ದಾರೆ.