BANTWAL
ಕೋಮು ಕೆರಳಿಸುವ ಸಂದೇಶ: ವಾಟ್ಸಪ್ ಅಡ್ಮಿನ್ ಸೇರಿ ಇಬ್ಬರ ಬಂಧನ
ಕೋಮು ಕೆರಳಿಸುವ ಸಂದೇಶ: ವಾಟ್ಸಪ್ ಅಡ್ಮಿನ್ ಸೇರಿ ಇಬ್ಬರ ಬಂಧನ
ಬಂಟ್ವಾಳ, ಜನವರಿ 12 : ಕೋಮು ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸಪ್‌ನಲ್ಲಿ ಕಳುಹಿಸುತ್ತಿದ್ದ ಇಬ್ಬರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಎಲ್ಲೆಡೆ ಮುಂಜಾಗೃತ ಕ್ರಮವಾಗಿ ಪೋಲಿಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಈ ಸಂದರ್ಭದಲ್ಲಿ ವಾಟ್ಸಾಪ್ ಮೂಲಕ ಕೋಮು ಭಾವನೆಗಳನ್ನು ಕೆರಳಿಸುತ್ತಿದ್ದ ಇಬ್ಬರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ಎಡ್ಮಿನ್ ಆಗಿದ್ದ ಬಂಟ್ವಾಳ ಇರಾದ ಸತೀಶ್ ಮತ್ತು ಬಾಲಕೃಷ್ಣ ಪೂಜಾರಿ ಎನ್ನುವವರೇ ಬಂಧಿತ ಆರೋಪಿಗಳು.
ಇವರು ಧಾರ್ಮಿಕ ಭಾವನೆಗಳನ್ನು ಹಾನಿಯುಂಟುಮಾಡುವುದರೊಂದಿಗೆ ಮಹಿಳೆಯೊಬ್ಬಳ ಚಾರಿತ್ರ್ಯ ಹರಣ ಮಾಡುವ ಸಂದೇಶಗಳನ್ನು 2 ವಾಟ್ಸಾಪ್ ಗ್ರೂಪ್‌ಗಳಲ್ಲಿ ಬಂಧಿತರು ಪೋಸ್ಟ್ ಮಾಡುತ್ತಿದ್ದರು.
ಇವರ ಮೇಲೆ ಐಪಿಸಿ ಸೆಕ್ಷನ್ 153(ಎ) , 354 ಮತ್ತು 504 ರ ಅಡಿ ಪ್ರಕರಣ ದಾಖಲಾಗಿದೆ.
You must be logged in to post a comment Login