KARNATAKA
‘ಎಲ್ಲೇ ಇದ್ದರೂ ಬನ್ನಿ ಅಪ್ಪಾ’ ಮನೆ ಬಿಟ್ಟು ಹೋದ ತಂದೆಯ ಬರುವಿಕೆಗಾಗಿ ಕಾಯುತ್ತಿದೆ ಮುದ್ದು ಮಗಳ ಶವ..!
ಮೈಸೂರು : ರಸ್ತೆ ವಿಭಜಕಕ್ಕೆ ಸ್ಕೂ ಟರ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವಿಗೀಡಾಗಿದ್ದು ಮುದ್ದು ಮಗಳ ಮುಖದ ಅಂತಿಮ ದರ್ಶನಕ್ಕಾಗಿ ಮನೆ ಬಿಟ್ಟು ಹೊರಟು ಹೋಗಿರುವ ತಂದೆ ಬರಬಹುದು ಎಂಬ ಆಸೆಯಿಂದ ವಿದ್ಯಾರ್ಥಿನಿಯ ಶವವನ್ನು ಕುಟುಂಬಸ್ಥರು ಕಾದಿರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕೂರ್ಗಳ್ಳಿಯ ಬೆಮೆಲ್ ಮುಂಭಾಗ ರಸ್ತೆ ವಿಭಜಕಕ್ಕೆ ಸ್ಕೂ ಟರ್ ಡಿಕ್ಕಿ ಹೊಡೆದು ಕನಕಗಿರಿ ನಿವಾಸಿ ನಾಗರಾಜು ಎಂಬವರ ಪುತ್ರಿ ಕವನಾ(18) ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ತರಗತಿ ಓದುತ್ತಿದ್ದ ಕವನಾ ಸೋಮವಾರ ಬೆಳಗ್ಗೆ ಸ್ನೇಹಿತರ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆಯ ತಪ್ಪಿ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆ ರಭಸಕ್ಕೆ ಕವನಾ ಕೆಳಕ್ಕೆ ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕವನಾಳ ತಂದೆ ನಾಗರಾಜು ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದರಾದರೂ ಆಕೆಯ ಮುಖ ಕೊನೆಯ ಬಾರಿಗೆ ನೋಡಲು ಬರಬಹುದು ಎಂಬ ನಿರೀಕ್ಷೆಯಲ್ಲಿ ಆಕೆಯ ಕುಟುಂಬವಿದ್ದು, ಒಂದು ದಿನದ ಮಟ್ಟಿಗೆ ಮೃತದೇಹವನ್ನು ಕುಟುಂಬ ಕಾದಿರಿಸಿದೆ. ವಾಪಸ್ ಬರುವಂತೆ ನಾಗರಾಜು ಅವರಿಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಎಲ್ಲೇ ಇದ್ದರೂ ಮಗಳ ಅಂತ್ಯಕ್ರಿಯೆಗೆ ಬಂದು ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಮೈಸೂರಿನ ವಿವಿ ಪುರಂ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
You must be logged in to post a comment Login