Connect with us

    KARNATAKA

    ಕ್ಯಾಂಡಲ್ ಹಿಡಿದು ಪೆಟ್ರೋಲ್ ಹಾಕುವಾಗ ಬೆಂಕಿ ಅನಾಹುತಕ್ಕೆ 16 ವರ್ಷದ ವಿಧ್ಯಾರ್ಥಿನಿ ಬಲಿ

    ತುಮಕೂರು ಡಿಸೆಂಬರ್ 11 : ಕರೆಂಟ್ ಇಲ್ಲದ ಹಿನ್ನಲೆ ಕ್ಯಾಂಡಲ್ ಹಚ್ಚಿ ಬೈಕ್  ಗೆ ಪೆಟ್ರೋಲ್ ಹಾಕುವಾಗ ಉಂಟಾದ ಬೆಂಕಿ ಅವಘಡಕ್ಕೆ 16 ವರ್ಷ ವಿಧ್ಯಾರ್ಥಿನಿಯೊಬ್ಬಳು ಸಾವನಪ್ಪಿದ ಘಟನೆ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.


    ಮೃತ ವಿಧ್ಯಾರ್ಥಿನಿಯನ್ನು ಕಟ್ಟಿಗೆಹಳ್ಳಿ ಗ್ರಾಮದ ನಿವಾಸಿ ಸೌಂದರ್ಯ (16) ಎಂದು ಗುರುತಿಸಲಾಗಿದೆ. ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿದ್ದರು. ಶುಕ್ರವಾರ ರಾತ್ರಿ ಮನೆಯ ಅಂಗಡಿಯಲ್ಲಿ ವಿದ್ಯುತ್ ಇಲ್ಲದಾಗ ಮೊಂಬತ್ತಿ ಹಚ್ಚಿ ಇಡಲಾಗಿತ್ತು. ಎದುರಿನಲ್ಲಿಯೇ ಬೈಕ್‌ಗೆ ಪೆಟ್ರೋಲ್ ಹಾಕುತ್ತಿದ್ದರು, ಈ ವೇಳೆ ಕರೆಂಟ್ ಬಂದಿದೆ, ಇದರಿಂದ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಬಾಟಲಿ ಕೈ ಬಿಟ್ಟ ಕಾರಣ ಪೆಟ್ರೋಲ್ ಚೆಲ್ಲಿ ಮೇಣದಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಅಂಗಡಿ ಸಾಮಗ್ರಿ ಆಹುತಿಯಾಗಿತ್ತು.

    ಗಾಯಗೊಂಡಿದ್ದ ಸೌಂದರ್ಯ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply