Connect with us

    LATEST NEWS

    ಮತಾಂತರಕ್ಕೆ ಒಪ್ಪದ ಯುವತಿಯನ್ನು ಗುಂಡಿಕ್ಕಿ ಕೊಲೆ

    ಮತಾಂತರಕ್ಕೆ ಒಪ್ಪದ ಯುವತಿಯನ್ನು ಗುಂಡಿಕ್ಕಿ ಕೊಲೆ

    ಫರಿದಾಬಾದ್, ಅಕ್ಟೋಬರ್ 27: ಕಾಲೇಜು ಯುವತಿಯೋರ್ವಳನ್ನು ಹಾಡುಹಗಲೇ ಗುಂಡಿಕ್ಕಿ ಕೊಂದ ಘಟನೆ ಹರ್ಯಾಣದ ಫರಿದಾಬಾದ್ ನಲ್ಲಿ ನಡೆದಿದೆ.

    ನಿಖಿತಾ ಥೋಮರ್ ಎನ್ನುವ ಯುವತಿಯನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ತೌಫೀಕ್ ಎನ್ನುವ ಯುವಕ ಆಕೆಯನ್ನು ಗುಂಡಿಕ್ಕಿ ಕೊಂದ ಆರೋಪಿಯಾಗಿದ್ದಾನೆ.

    ನಿಖಿತಾಳನ್ನು ಎರಡು ವರ್ಷಗಳ ಹಿಂದೆಯೂ ತೌಫೀಕ್ ನಿರಂತರವಾಗಿ ಪೀಡಿಸುತ್ತಿದ್ದ ಎನ್ನುವ ಮಾಹಿತಿಯನ್ನು ಯುವತಿಯ ಕುಟುಂಬ ಸದಸ್ಯರು ನೀಡಿದ್ದು, ಈ ಸಂಬಂಧ ತೌಫೀಕ್ ಮೇಲೆ ನಿಖಿತಾ ದೂರನ್ನೂ ದಾಖಲಿಸಿದ್ದಳು ಎನ್ನಲಾಗಿದೆ.

    ಇತ್ತೀಚಿನ ದಿನಗಳಲ್ಲಿ ಮತ್ತೆ ಆಕೆಗೆ ತನ್ನನ್ನು ಮದುವೆಯಾಗುವಂತೆ ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ನಿರಂತರವಾಗಿ ಪೀಡಿಸಲು ಆರಂಭಿಸಿದ್ದ.

    ಇದಕ್ಕೆ ಸೊಪ್ಪು ಹಾಕದ ನಿಖಿತಾ ಥೋಮರ್ ಳನ್ನು ತೌಫೀಕ್ ಹಾಡುಹಗಲೇ ತಲೆ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

    ತೌಫೀಕ್ ಯುವತಿಯನ್ನು ಹತ್ಯೆ ಮಾಡುವ ಸಿಸಿ ಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲಾರಂಭಿಸಿದೆ.

    ಈ ಘಟನೆಯನ್ನು ಇತ್ತೀಚೆಗೆ ತಾನಿಷ್ಕ್ ಜ್ಯುವೆಲ್ಲರಿ ಸಂಸ್ಥೆ ಬಿಡುಗಡೆ ಮಾಡಿದ್ದ ಏಕತ್ವಾಂ ಜಾಹೀರಾತಿಗೂ ಹೋಲಿಸಲಾಗುತ್ತಿದೆ.

    ಜಾಹೀರಾತಿನಲ್ಲಿ ಹಿಂದೂ ಯುವತಿ ಮುಸ್ಲಿಂ ಯುವಕನೊಂದಿಗೆ ವಿವಾಹವಾಗುವ ಮೂಲಕ ಸಾಮರಸ್ಯ ಹಾಗೂ ಏಕತೆಯನ್ನು ಬಿಂಬಿಸುವ ಸಂದೇಶವನ್ನು ನೀಡಲಾಗಿತ್ತು.

    ಈ ಜಾಹೀರಾತಿಗೆ ತೀವೃ ಆಕ್ಷೇಪ ಕಂಡು ಬಂದ ಹಿನ್ನಲೆಯಲ್ಲಿ ಸಂಸ್ಥೆ ಜಾಹೀರಾತನ್ನು ತಕ್ಷಣವೇ ಹಿಂಪಡೆದಿತ್ತು.

    Video:

    Share Information
    Advertisement
    Click to comment

    You must be logged in to post a comment Login

    Leave a Reply