Connect with us

DAKSHINA KANNADA

ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಟ್ರಕ್- ಬೈಕ್ ಡಿಕ್ಕಿ: ನವ ದಂಪತಿ ದಾರುಣ ಸಾವು

ಮಂಗಳೂರು, ಅಕ್ಟೋಬರ್ 27 : ನಗರದ ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಂಗಳೂರಿನ ಬಜಾಲು ನಿವಾಸಿಗಳಾದ ರಯಾನ್ ಫೆರ್ನಾಂಡೀಸ್(37) ಹಾಗೂ ಪತ್ನಿ ಪ್ರಿಯಾ ಫೆರ್ನಾಂಡೀಸ್ ಸಾವನ್ನಪ್ಪಿದ ದುರ್ದೈವಿಗಳು. ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉದ್ಯೋಗಿಗಳಾಗಿರುವ ಈ ಇಬ್ಬರು ದಂಪತಿ ಉಳ್ಳಾಲದ ಬಂಗೇರಲೇನ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಕೆಲಸ ಮುಗಿಸಿ ಉಳ್ಳಾಲದ ಮನೆಗೆ ಮರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬಂದ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದಿದ್ದು, ಪ್ರಿಯಾ ಫೆರ್ನಾಂಡೀಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಯನ್ ಫೆರ್ನಾಂಡೀಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.