Connect with us

KARNATAKA

ನವಿಲು ಗರಿ ಸಂಗ್ರಹ ಮತ್ತು ಮಾರಾಟ ಮಾಡುವುದು ಅಪರಾಧವಲ್ಲ – ಅರಣ್ಯ ಸಚಿವ ಖಂಡ್ರೆ

ಬೆಂಗಳೂರು ಅಕ್ಟೋಬರ್ 28: ನೈಸರ್ಗಿಕವಾಗಿ ಸಿಗುವ ನವಿಲು ಗರಿಗಳನ್ನು ಮನೆಗಳಲ್ಲಿ ಸಂಗ್ರಹ ಮತ್ತು ದೇಶದೊಳಗೆ ಮಾರಾಟ ಮಾಡುವುದು ಅಪರಾಧವಲ್ಲ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.


ದರ್ಗಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನವಿಲುಗರಿ ಬಳಕೆ ಕುರಿತಂತೆ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲು ಗರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.


ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಮಾಡಲುಕೆಲಸವಿಲ್ಲ. ಹೀಗಾಗಿ ಎಲ್ಲದನ್ನೂ ವಿವಾದ ಮಾಡುತ್ತಾರೆ. ಕಾಯ್ದೆ ಪ್ರಕಾರ ನವಿಲುಗರಿಗಳ ಬಳಕೆಗೆ ಯಾವುದೇ ನಿರ್ಬಂಧವಿಲ್ಲ, ಆದರೆ, ನವಿಲುಗರಿ ಮತ್ತು ತಯಾರಿಸಿ ಯಾವುದೇ ವಸ್ತುಗಳನ್ನು ವಿದೇಶಗಳಿಗೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ನವಿಲುಗಳಿಂದ ನೈಸರ್ಗಿಕವಾಗಿ ಸಂಗ್ರಹಿಸುವುದು ದೇಶದೊಳಗೆ ಮಾಡುವುದು ಗರಿಗಳನ್ನು ಮತ್ತು ಮಾರಾಟ ಕಾನೂನು ಬಾಹಿರವಲ್ಲ. ಅದೇ ನವಿಲು ಗಳಿಗೆ ಹಿಂಸೆ ನೀಡಿ ಗರಿಗಳನ್ನು ಕೀಳುವುದು ಶಿಕಾರ್ಹ ಅಪರಾದ ಎಂದು ಸ್ಪಷ್ಟಪಡಿಸಿದರು.

Share Information
Advertisement
Click to comment

You must be logged in to post a comment Login

Leave a Reply