KARNATAKA
ಜೈಶ್ರೀರಾಮ್ ಎಂದು ಕೂಗಿ ಭಕ್ತರನ್ನು ಹುರಿದುಂಬಿಸಿದ ಸಿಎಂ ಸಿದ್ದರಾಮಯ್ಯ – ವಿಡಿಯೋ ವೈರಲ್

ಬೆಂಗಳೂರು ಜನವರಿ 22 : ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಇಂದು ಮುಗಿದಿದೆ. ಈ ನಡುವೆ ಕರ್ನಾಟಕದಲ್ಲೂ ಹಬ್ಬದ ವಾತಾವರಣ ನಿರ್ಮಾವಾಗಿದ್ದು, ಸ್ವತಃ ಸಿಎಂ ಸಿದ್ದಾರಮಯ್ಯ ಜೈ ಶ್ರೀರಾಮ್ ಎಂದು ಕೂಗಿದಲ್ಲದೇ ಸಾರ್ವಜನಿಕರಿಂದಲೂ ಹೇಳಿಸಿದ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ರಾಮ ಸೀತಾ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಶ್ರೀರಾಮ್ ಕೂಗಿ ಭಕ್ತರನ್ನು ಹುರಿದುಂಬಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಅವರು, ‘ಜೈ ಶ್ರೀರಾಮ್ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸೊತ್ತು’ ಎಂದು ಹೇಳಿದರು. ಬಳಿಕ ‘ಜೈಶ್ರೀರಾಮ್’ ಎಂದು ಕೂಗಿದ್ದಲ್ಲದೇ, ಸಾರ್ವಜನಿಕರಿಂದಲೂ ಹೇಳಿಸಿದರು.