LATEST NEWS
ಕುಟುಂಬದ ಬಗ್ಗೆ ಅವಹೇಳನ ಮಾಡಿದ್ರೆ ನೀವು ಬಿಡ್ತೀರಾ – ಸಿಎಂ ಸಿದ್ದರಾಮಯ್ಯ ಪ್ರಶ್ನೆ…!!
ಮಂಗಳೂರು ಅಗಸ್ಟ್ 01: ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಮರು ತನಿಖೆ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಲಾಯರ್ ಆಗಿ ಹೇಳೊದಾದ್ರೆ ಅವರು ಹೈಕೋರ್ಟ್ ಗೆ ಅಫೀಲು ಹೊಗ್ಬೆಕು ಎಂದಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸೌಜನ್ಯಾ ಕೇಸನ್ನು ಈಗಾಗಲೇ ಸಿಬಿಐಗೆ ಕೊಡಲಾಗಿತ್ತು. ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸೌಜನ್ಯ ಹೆತ್ತವರು ಮರು ತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಾತ್ಮಕವಾಗಿ ಏನು ಮಾಡಬೇಕು ಅಂತ ನೋಡಬೇಕಾಗತ್ತೆ. ನ್ಯಾಯಾಲಯಕ್ಕೆ ಮತ್ತೆ ಅಪೀಲು ಹಾಕಬೇಕಾಗುತ್ತೆ. ತೀರ್ಪು ಏನಿದೆ ಅಂತ ನೋಡಿದ ಮೇಲೆ ನಿರ್ಧಾರ ಮಾಡ್ತೀವಿ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ ಖಚಿತ ಎಂದು ಹೇಳಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ದ ಅಥವ ಯಾರ ವಿರುದ್ಧವೂ ಅವಹೇಳನ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಟೀಕೆ ಮಾಡಿದರೂ ಕ್ರಮ ತಗೋತೀರಾ ಎಂದು ಕೇಳಿದ್ದಕ್ಕೆ, ಟೀಕೆ ಮಾಡಿದರೆ ಕ್ರಮ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಿದರೆ ಮಾತ್ರ ಕ್ರಮ. ಟೀಕೆ ಬೇರೆ, ಸುಳ್ಳು ಸುದ್ದಿ , ವೈಯಕ್ತಿಕ ತೇಜೋವಧೆ ಮಾಡೋದು ಬೇರೆ. ಕುಟುಂಬದ ಬಗ್ಗೆ ಅವಹೇಳನ ಮಾಡಿದ್ರೆ ನೀವು ಬಿಡ್ತೀರಾ ಎಂದು ಮರು ಪ್ರಶ್ನೆ ಹಾಕಿದರು.