LATEST NEWS
ಅಮರನಾಥ ಗುಹೆ ಬಳಿ ಮೇಘ ಸ್ಫೋಟ ; 10ಕ್ಕೆ ಏರಿಕೆ ಮೃತರ ಸಂಖ್ಯೆ , 40ಕ್ಕೂ ಹೆಚ್ಚು ಮಂದಿ ನಾಪತ್ತೆ
ಶ್ರೀನಗರ, ಜುಲೈ 08: ಜಮ್ಮು ಮತ್ತು ಕಾಶ್ಮೀರದ ಪವಿತ್ರ ಗುಹಾಂತರ ದೇವಾಲಯ ಅಮರನಾಥದ ಬಳಿ ಶುಕ್ರವಾರ ಮೇಘಸ್ಫೋಟದಿಂದ 10 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥದ ಪವಿತ್ರ ಮಂದಿರದ ಬಳಿ ಶುಕ್ರವಾರ ಮೇಘಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಹಲವಾರು ಗಾಯಗಳನ್ನ ನಿರೀಕ್ಷಿಸಲಾಗಿದ್ದು, ಇದುವರೆಗೆ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಎನ್ಡಿಆರ್‌ಎಫ್ ಡಿಜಿ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಇನ್ನು ಗಾಯಾಳುಗಳನ್ನು ಚಿಕಿತ್ಸೆಗಾಗಿ ಏರ್ಲಿಫ್ಟ್ ಮಾಡಲಾಗುತ್ತಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
#WATCH | J&K: Visuals from lower reaches of Amarnath cave where a cloud burst was reported. Rescue operation underway by NDRF, SDRF & other agencies
(Source: ITBP) pic.twitter.com/o6qsQ8S6iI
— ANI (@ANI) July 8, 2022
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಧಿಕಾರಿಗಳ ಪ್ರಕಾರ, 5.30 ರ ಸುಮಾರಿಗೆ ಕೆಳಗಿನ ಪವಿತ್ರ ಗುಹೆಯಲ್ಲಿ (ಅಮರನಾಥ್) ಮೇಘಸ್ಫೋಟ ಸಂಭವಿಸಿದೆ. ಮೇಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾದ ನಂತರ ಗುಹೆಯ ಮೇಲಿನಿಂದ ಮತ್ತು ಬದಿಗಳಿಂದ ನೀರು ಬಂದಿದೆ ಎಂದು ಐಟಿಬಿಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.