UDUPI
ಸ್ವಚ್ಛ ಭಾರತ್ ರಸಪ್ರಶ್ನೆ ಕಾರ್ಯಕ್ರಮ : 650 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
ಸ್ವಚ್ಛ ಭಾರತ್ ರಸಪ್ರಶ್ನೆ ಕಾರ್ಯಕ್ರಮ : 650 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
ಉಡುಪಿ, ಡಿಸೆಂಬರ್. 05 :ಜಿಲ್ಲಾಡಳಿತ ಉಡುಪಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ , ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಸ್ವಚ್ಛ ಭಾರತ್ ರಸಪ್ರಶ್ನೆ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 650 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿದ್ದರು.
ಕಾರ್ಯಕ್ರಮದಲ್ಲಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭಾ, ಉಡುಪಿ ಪೌರಾಯುಕ್ತ ಮಂಜುನಾಥಯ್ಯ,
ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಪಾದ, ನಗರಸಭೆಯ ಪರಿಸರ ಇಂಜಿನಿಯರ್ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ವಿಜೇತರಿಗೆ ಪ್ರ.ಥಮ ಬಹುಮಾನ 10000 ರೂ, ದ್ವಿತೀಯ 6000 ರೂ ಹಾಗೂ ತೃತೀಯ 4000 ಗಳ ನಗದು ಬಹುಮಾನ ವಿತರಿಸಲಾಯಿತು.
ವಾಲ್‍ನೆಟ್ ನಾಲೆಡ್ಜ್ ಸಲ್ಯೂಷನ್ಸ್‍ನ ರಾಘವ ಚಕ್ರವರ್ತಿ ಹಾಗೂ ಜೇಕಬ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
You must be logged in to post a comment Login