LATEST NEWS
ಗಣೇಶನಿಗೆ ನಿದ್ರೆ ಮಾಡಲು ಬಿಡದೇ ಇದ್ದರೆ ಹೇಗೆ….?ಗಣೇಶ ಚತುರ್ಥಿಯ Special ವಿಡಿಯೋ
ಗಣೇಶನಿಗೆ ನಿದ್ರೆ ಮಾಡಲು ಬಿಡದೇ ಇದ್ದರೆ ಹೇಗೆ….?ಗಣೇಶ ಚತುರ್ಥಿಯ Special ವಿಡಿಯೋ
ಮಂಗಳೂರು ಸೆಪ್ಟೆಂಬರ್ 1: ದೇಶದೆಲ್ಲಡೆ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಕರ್ನಾಟಕದಲ್ಲೂ ಗೌರಿ ಗಣೇಶ ಹಬ್ಬದ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ರಾಜ್ಯದಾದ್ಯಂತ ವಿವಿಧ ಸಂಘ ಸಂಸ್ಥೆಗಳು ಗಣಪತಿ ಪ್ರತಿಷ್ಠಾಪನೆಗೆ ಸಿದ್ದತೆ ನಡೆಸುತ್ತಿವೆ. ಈ ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಾಡುವ ಶಬ್ದಮಾಲಿನ್ಯ ಸಂಬಂಧಿಸಿದಂತೆ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದೆಲ್ಲಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ರಾಜ್ಯದೆಲ್ಲಡೆ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಗೆ ಸಿದ್ದತೆಗಳನ್ನು ನಡೆಸಿವೆ. ಪ್ರತಿವರ್ಷದಂತೆ ಸಾರ್ವಜನಿಕ ಗಣೇಶೋತ್ಸವಗಳು ಸಂಭ್ರಮದಿಂದ ನಡೆಯಲಿದೆ.
ಗಣೇಶೋತ್ಸವ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಧ್ವನಿವರ್ಧಕಗಳ ಬಳಕೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವಂತಿರುತ್ತವೆ. ಈಗ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಡಿಜೆ ಸೌಂಡ್ ಗಳನ್ನು ಬಳಸಲು ಪ್ರಾರಂಭಿಸಿರುವುದು ಕೂಡ ಕಾರ್ಯಕ್ರಮ ನಡೆಯುವ ಆಸುಪಾಸಿನ ನಿವಾಸಿಗಳಿಗೆ ತೊಂದರೆಯುಂಟುಮಾಡುತ್ತಿದೆ.
ಈ ಶಬ್ದ ಮಾಲಿನ್ಯದಿಂದ ಗಣೇಶನಿಗೆ ಹೇಗೆ ತೊಂದರೆಯಾಗುತ್ತದೆ ಎನ್ನುವುದನ್ನು ಒಂದು ಆನಿಮೇಟೆಡ್ ವಿಡಿಯೋ ಮೂಲಕ ತೋರಿಸಲಾಗಿದೆ. ಗಣೇಶೋತ್ಸವ ಸಂಭ್ರಮದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಗಣೇಶ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ ಶಬ್ದಮಾಲಿನ್ಯ ಮಾಡಿ ದೇವರು ನಿದ್ರೆ ಮಾಡದ ಹಾಗೆ ಮಾಡುತ್ತಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಬಂಟ್ವಾಳ ಕಲ್ಲಡ್ಕ ನಿವಾಸಿ ಜಯರಾಮ್ ಹಾಗೂ ನವೀನ ಅವರು ಕ್ಲೇ ಆನಿಮೇಶನ್ ನಲ್ಲಿ ನಿರ್ಮಿಸಿರುವ ವಿಡಿಯೋ ಇದಾಗಿದ್ದು, ಮಣ್ಣಿನಲ್ಲಿ ಮೂರ್ತಿಯನ್ನು ತಯಾರಿಸಿ ಅದನ್ನು ಚಿತ್ರಿಕರಿಸಿ ನಂತರ ಆನಿಮೇಟ್ ಮಾಡಿ ವಿಡಿಯೋ ಮಾಡಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಾಟ್ಸಪ್ ಗಳ ಸ್ಟೇಟಸ್ ಗಳಲ್ಲಿ ಕಾಣಸಿಗುತ್ತಿದೆ.
ಆನಿಮೇಟೆಡ್ ವಿಡಿಯೋ ಮೂಲಕ ಗಣೇಶ ಚತುರ್ಥಿ ಸಂದರ್ಭದಲ್ಲಿ ಶಬ್ದ ಮಾಲಿನ್ಯವನ್ನು ಆದಷ್ಟು ಕಡಿಮೆ ಮಾಡಬೇಕೆನ್ನುವುದನ್ನು ಇದರಲ್ಲಿ ತೋರಿಸಲಾಗಿದ್ದು, ಈ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕೆಂಬ ಕಲ್ಪನೆ ಈ ಯುವಕರದ್ದಾಗಿದೆ.