ಗಣೇಶ್ ಚತುರ್ಥಿ ದಿನ ಭೀಕರ ರಸ್ತೆ ಅಪಘಾತ ಕೆರೆಗ ಬಿದ್ದ ಕಾರು ನಾಲ್ವರ ಸಾವು

ಪುತ್ತೂರು ಸೆಪ್ಟೆಂಬರ್ 2: ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚಾರು ಎಂಬಲ್ಲಿ ನಡೆದಿದೆ.

ಮೃತರನ್ನು ಮಡಿಕೇರಿಯ ಶುಂಠಿಕೊಪ್ಪ ನಿವಾಸಿಗಳೆಂದು ಹೇಳಲಾಗಿದೆ. ಪತಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಗ್ನಿಶಾಮಕದಳದವರು ಆಗಮಿಸಿದ್ದು ಕಾರನ್ನು ಮೇಲೆತ್ತುವ ಕಾರ್ಯ ನಡೆಸುತ್ತಿದ್ದಾರೆ.

ಮೃತರನ್ನು ಅಶೋಕ್, ಹೇಮಲತಾ, ವತ್ಸ,ಯಶಸ್ ಎಂದು ಗುರುತ್ತಿಸಲಾಗಿದೆ. ದುರ್ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿ ಪೊಲೀಸರು, ಅಗ್ನಿ ಶಾಮದಳದ ಸಿಬಂದಿಗಳು ಸ್ಥಳಿಯರ ನೆರವಿನಿಂದ ಕೆರೆಗೆ ಬಿದ್ದ ಕಾರನ್ನು ಮೇಲಕ್ಕೇತ್ತಿದ್ದರೂ , ಆದಗಲೇ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

VIDEO

 

Facebook Comments

comments