LATEST NEWS
ಎರಡು ಹುಲಿಗಳ ನಡುವೆ ಕಾಳಗದ ವಿಡಿಯೋ ವೈರಲ್
ನವದೆಹಲಿ: ರಕ್ಷಿತಾರಣ್ಯದಲ್ಲಿ ಎರಡು ಬಲಿಷ್ಠ ಹುಲಿಗಳ ನಡುವೆ ನಡೆದ ಕಾಳಗದ ವಿಡಿಯೋವನ್ನು ಐಎಫ್‌ಎಸ್ ಪ್ರವೀಣ್ ಕಸ್ವಾನ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಎರಡು ಬಲಿಷ್ಠ ಹುಲಿಗಳು ಕಾಡಿನ ಹಾದಿಯಲ್ಲಿ ಅಕ್ಕಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಸ್ವಲ್ಪ ಸಮಯದಲ್ಲಿ ಮಾರ್ಗ ಬದಲಿಸುವ ಒಂದು ಹುಲಿ ಮತ್ತೊಂದು ಹುಲಿ ಮೇಲೆ ಎರಗುತ್ತದೆ.
ಸ್ವಲ್ಪ ಸಮಯ ಜಗಳದ ಬಳಿಕ ಎರಡೂ ಹುಲಿಗಳು ತಮ್ಮ ಪಾಡಿಗೆ ತಾವು ತೆರಳುತ್ತವೆ. ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಐಎಫ್ಎಸ್ ಅಧಿಕಾರಿ ಪ್ರವೀಣ್ ಅವರು ಕ್ಲಾಷ್ ಆಫ್ ದಿ ಟೈಟಾನ್ಸ್, ಭಾರತದಿಂದ. ವಾಟ್ಸಾಪ್‌ನಿಂದ ಬಂದ ವಿಡಿಯೊ ಎಂದು ಅಧಿಕಾರಿ ಬರೆದುಕೊಂಡಿದ್ದಾರೆ.