Connect with us

LATEST NEWS

ಮತ್ತೆ ಮುಂದುವರೆದ ಪುಂಡಾಟಿಕೆ – ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್…!!

ಮಂಗಳೂರು : ಇತ್ತೀಚೆಗೆ ಮಂಗಳೂರಿನ ವಿವಿಧ ದೇವಸ್ಥಾನಗಳ ಹುಂಡಿಗಳಲ್ಲಿ ದುಷ್ಕರ್ಮಿಗಳು ಕಾಂಡೋಮ್ ಹಾಗೂ ಧರ್ಮದ ವಿರುದ್ದ ಅವಹೇಳನಕಾರಿಯಾಗಿ ಬರೆದ ಹಳೆ ನೋಟುಗಳ ಹಾಕಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಪ್ರಕರಣ ನಡೆದಿದೆ.


ಉಳ್ಳಾಲ ನಗರಸಭಾ ವ್ಯಾಪ್ತಿಯ ಪ್ಯಾರಿಸ್ ಜಂಕ್ಷನ್​ನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ‌ ದುಷ್ಕರ್ಮಿಗಳು ಕಾಂಡೊಮ್ ಸಹಿತ ಚುಣಾವಣಾ ಪ್ರಚಾರದ ಪತ್ರಗಳು ಹಾಗೂ ಬಿಜೆಪಿ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಅವರ ಭಾವಚಿತ್ರ ವಿರೂಪಗೊಳಿಸಿದಂತಹ ಕರಪತ್ರಗಳನ್ನು ಹಾಕಿದ್ದಾರೆ.


ಕೋಮುಸೂಕ್ಷ್ಮ ಪ್ರದೇಶವಾದ ಉಳ್ಳಾಲದಲ್ಲಿ‌ ಇಂತಹ ಹೇಯ ಕೃತ್ಯ ನಡೆದಿದ್ದು ಸ್ಥಳೀಯರು ಹಾಗೂ ಭಕ್ತವೃಂದ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ವಾರ್ಷಿಕ ಕೋಲೋತ್ಸವದ ಹಿನ್ನಲೆಯಲ್ಲಿ ಕಾಣಿಕೆ ಡಬ್ಬಿಯ ಬೀಗ ತೆಗೆದಿದ್ದು, ಈ ಸಂದರ್ಭದಲ್ಲಿ ಕಾಂಡೋಮ್​ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.