ಪುತ್ತೂರು ಎಪ್ರಿಲ್ 06: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಜೊತೆ ಇರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ಇದೀಗ ಪೋಟೋದಲ್ಲಿರುವ ಮಹಿಳೆ ಸ್ಪಷ್ಟೀಕರಣ ನೀಡಿದ್ದು, ಶಾಸಕ ಸಂಜೀವ ಮಠಂದೂರು ಜೊತೆಗಿರುವ ಪೊಟೋ ಎಡಿಟ್ ಮಾಡಿದ್ದು, ಅದನ್ನು ವೈರಲ್ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು” ಎಂದು ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಹೇಳಿಕೆ ನೀಡಿರುವ ಮಹಿಳೆ, ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನನ್ನ ವೈಯಕ್ತಿಕವಾಗಿರುವ ಫೋಟೊಗಳನ್ನು ಶಾಸಕರ ಫೋಟೋ ಜೊತೆ ಜೋಡಿಸಲಾಗಿದ್ದು, ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ನೋವಾಗಿದೆ ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ. ನಾನು ಶಾಸಕರನ್ನು ಭೇಟಿ ಮಾಡುವ ಪ್ರಸಂಗ ಈ ಹಿಂದೆ ಬಂದಿರಲೇ ಇಲ್ಲ.

ಹಾಗಾಗಿ ನಾನು ಪೋಟೋ ಎಡಿಟ್ ಮಾಡಿ ವೈರಲ್ ಮಾಡಿದವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.





