LATEST NEWS
ಟೈಮಿಂಗ್ ವಿಚಾರ – ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಗಳ ಬೀದಿ ಕಾಳಗ….!!

ಉಡುಪಿ ಎಪ್ರಿಲ್ 06: ಕರಾವಳಿಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಆಗಾಗ ಕಾಳಗ ನಡೆಯುತ್ತಿರುತ್ತಲೇ ಇದೆ. ಇದೀಗ ಉಡುಪಿ ಸಿಟಿ ಬಸ್ ನಿಲ್ದಾಣ ದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಬಸ್ಸಿನ ಕಂಡಕ್ಟರ್ ಗಳು ಹೊಡೆದಾಡಿ ಕೊಂಡಿದ್ದಾರೆ.
ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್ಸುಗಳ ಕಂಡೆಕ್ಟರ್ ಗಳು ಟೈಮಿಂಗ್ಸ್ ವಿಚಾರದಲ್ಲಿ ಜಗಳ ಶುರು ಮಾಡಿದ್ದು,ಬಳಿಕ ಪ್ರಯಾಣಿಕರ ಎದುರೇ ಬೀದಿ ಜಗಳ ಮಾಡಿದ್ದಾರೆ. ಆದರೆ ಈ ಜಗಳ ಬಿಡಿಸಲು ಮಾತ್ರ ಯಾರೂ ಹೋಗಿಲ್ಲ. ಪ್ರಯಾಣಿಕ ರೊಬ್ಬರು ತೆಗೆದ ವಿಡಿಯೋ ಇದೀಗ ವೈರಲ್ ಅಗಿದೆ. ಸಾರ್ವಜನಿಕ ಶಾಂತಿ ಭಂಗ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಖುವಂತೆ ಅಗ್ರಹ ವ್ಯಕ್ತವಾಗಿದೆ.
