LATEST NEWS
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ಮ್ಯಾಥ್ಯೂ ಪ್ಯಾಟ್ರಿಕ್ ವಾಸ್ ನಿಧನ

ಮಂಗಳೂರು ಅಕ್ಟೋಬರ್ 22: ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಧರ್ಮಗುರು ಫಾ. ಮ್ಯಾಥ್ಯೂ ಪ್ಯಾಟ್ರಿಕ್ ವಾಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿತ್ತು.
ಜಾನ್ ಮತ್ತು ಲೂಸಿ ವಾಸ್ ದಂಪತಿಯ ಪುತ್ರನಾಗಿ ಸಿದ್ದಕಟ್ಟೆಯಲ್ಲಿ ಜನಿಸಿದ ಫ್ರಾಸ್ ವಾಸ್ ಅವರು ಏಪ್ರಿಲ್ 30, 1987 ರಂದು ಪೌರೋಹಿತ್ಯಕ್ಕೆ ದೀಕ್ಷೆ ಪಡೆದರು. ಕಿನ್ನಿಗೋಳಿ ಮತ್ತು ಕುಲಶೇಖರ್ ಪ್ಯಾರಿಷ್‌ಗಳಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ, ಸಿಸಿಸಿಯ ಸಹಾಯಕ ನಿರ್ದೇಶಕರು ಮತ್ತು ನಿರ್ದೇಶಕರಾಗಿ ಮತ್ತು 2018 ರಲ್ಲಿ ಕಿನ್ನಿಗೋಳಿ ಚರ್ಚ್‌ನಲ್ಲಿ ಅಧಿಕಾರ ಸ್ವೀಕರಿಸುವ ಮೊದಲು ಬೇಲಾ, ಉಡುಪಿ ಮತ್ತು ಏಂಜೆಲೂರು ಪ್ಯಾರಿಷ್‌ಗಳಲ್ಲಿ ಪಾದ್ರಿಗಳಾಗಿ ಸೇವೆ ಸಲ್ಲಿಸಿದ್ದರು.

ವಿಧಿವಶರಾದ ಫಾ. ಮ್ಯಾಥ್ಯೂ ಅವರ ಅಂತ್ಯಕ್ರಿಯೆ ಮತ್ತು ವಿಧಿವಿಧಾನ ಕ್ರಿಯೆಗಳು ಅಕ್ಟೋಬರ್ 23 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್‌ನಲ್ಲಿ ನಡೆಯಲಿದೆ.