FILM
ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇನ್ನಿಲ್ಲ….!!
ಮುಂಬೈ: ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಸರೋಜ್ ಖಾನ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸರೋಜ್ ಖಾನ್ ನಿಧನರಾಗಿದ್ದಾರೆ. ಸರೋಜ್ ಖಾನ್ ಅವರಿಗೆ 72 ವರ್ಷ ವಯಸ್ಸಾಗಿತ್ತು.
ಸರೋಜ್ ಖಾನ್ ರನ್ನು ಬಾಲಿವುಡ್ ಅಂಗಳದಲ್ಲಿ ಮಾಸ್ಟರ್ ಜೀ ಎಂದೇ ಕರೆಯಲಾಗುತ್ತಿತ್ತು. ತಮ್ಮ 3ನೇ ವಯಸ್ಸಿನಲ್ಲಿ ನಜರಾನಾ ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. 1950 ರಲ್ಲಿ ಸಿನಿಮಾಗಳಲ್ಲಿನ ನೃತ್ಯ ತಂಡಗಳಲ್ಲಿ ಸಹ ನರ್ತಕಿಯಾಗಿ ಗುರುತಿಸಿಕೊಂಡರು.
ಸರೋಜ್ ಖಾನ್ 1974 ರಲ್ಲಿ ಬಿಡುಗಡೆಯಾದ ಹಿಂದೆ ‘ನಾಮ್’ ಸಿನಿಮಾದ ಮೂಲಕ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದ ಅವರು, ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸ್ಮರಣೀಯ ಹಾಡುಗಳಿಗೆ ನೃತ್ಯಸಂಯೋಜನೇ ಮಾಡಿ ಜನಪ್ರೀಯರಾಗಿದ್ದರು. ದೇವದಾಸ್ ಸಿನಿಮಾದ ಡೋಲಾ ರೇ ಡೋಲಾ ಹಾಡಿನ ನೃತ್ಯ, ತೇಜಾಬ್ ಚಿತ್ರದ ಏಕ್ ದೋ ತೀನ್ ಹಾಡಿನ ನೃತ್ಯ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.
‘ಡೋಲಾ ರೆ ಡೋಲಾ’, ಏಕ್ ದೋ ತೀನ್’, ಚೋಲಿ ಕೆ ಪೀಚೆ ಕ್ಯಾಹೆ’, ಸೇರಿದಂತೆ ಇನ್ನೂ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸರೋಜ್ ಖಾನ್ ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ದೊರಕಿದೆ.