Connect with us

KARNATAKA

ಅವಧಿ ಮೀರಿದ ಕ್ವಿಂಟಾಲ್ ಗಟ್ಟಲೆ ಚಾಕಲೇಟ್ ನ್ನು ರಸ್ತೆಗೆ ಎಸೆದ ಡೀಲರ್

ಕಾರವಾರ: ಅವಧಿ ಮೀರಿರುವ ಕ್ವಿಂಟಾಲ್ ಗಟ್ಟಲೆ ಚಾಕಲೇಟ್ ನ್ನು ಡೀಲರ್ ಒಬ್ಬರು ರಸ್ತೆಯಲ್ಲೇ ಎಸೆದು ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಡ್ಲಮನೆ ಎಂಬಲ್ಲಿ ನಡೆದಿದೆ.


ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್ ಹೊಂದಿದ ಚಾಕ್ಲೇಟ್ ಇದಾಗಿದ್ದು ಲಾಕ್ ಡೌನ್ ನಿಂದ ಈ ಕಂಪನಿಯ ಚಾಕ್ಲೇಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಈ ಕಾರಣದಿಂದ ಇದರ ಅವಧಿ ಮುಗಿದಿದ್ದು, ಕಂಪನಿಯ ಡೀಲರ್ ನಗರಸಭೆಯ ಕಸ ವಿಲೇವಾರಿಗೆ ನೀಡದೆ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ.


ಹೀಗೆ ಎಸೆದ ಚಾಕ್ಲೇಟ್ ಅನ್ನು ದನಗಳು ತಿಂದಿವೆ. ಅಲ್ಲದೆ ಮಕ್ಕಳು ಕೂಡ ಎತ್ತಿಕೊಂಡು ಹೋಗಿದ್ದಾರೆ. ರಾಶಿಗಟ್ಟಲೆ ಈ ಚಾಕ್ಲೇಟ್ ಗಳು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ಪಕ್ಕದಲ್ಲೇ ಕೆರೆ ಸಹ ಇರುವುದರಿಂದ ಮಳೆಯಲ್ಲಿ ಈ ನೀರಿಗೆ ಸೇರಿ ಮಲೀನವಾಗಲಿದೆ. ಹೀಗಾಗಿ ಸ್ಥಳೀಯ ಜನರು ಈ ಚಾಕ್ಲೇಟ್ ಕಂಪನಿ ಡೀಲರ್ ವಿರುದ್ಧ ನಗರಸಭೆಗೆ ದೂರು ಸಹ ನೀಡಿದ್ದಾರೆ