Connect with us

UDUPI

ಯಕ್ಷಗಾನದ ಪದ್ಮ ಚಿಟ್ಟಾಣಿ ಆರೋಗ್ಯ ಸ್ಥಿತಿ ಗಂಭೀರ

ಯಕ್ಷಗಾನದ ಪದ್ಮ ಚಿಟ್ಟಾಣಿ ಆರೋಗ್ಯ ಸ್ಥಿತಿ ಗಂಭೀರ

ಉಡುಪಿ ಅಕ್ಟೋಬರ್ 3: ಬಡಗು ತಿಟ್ಟು ಯಕ್ಷರಂಗದ ಮಹಾನ್ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಉಸಿರಾಟದ ಸಮಸ್ಯೆ ಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ೮೬ ವರ್ಷ ಪ್ರಾಯದ ಚಿಟ್ಟಾಣಿ ಕಳೆದ ನಾಲ್ಕು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಯಕ್ಷರಂಗದ ಏಕೈಕ ಪದ್ಮ ಪ್ರಶಸ್ತಿ ವಿಜೇತ ಕಲಾವಿದರಾದ ಚಿಟ್ಟಾಣಿ ಸುಮಾರು ೭ ದಶಕಗಳಿಂದ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಕೌರವ ,ಕೀಚಕ, ದುಷ್ಟಬುದ್ದಿ , ಕಾರ್ತವೀರ್ಯ ಮುಂತಾದ ಪಾತ್ರಗಳು ಅವರಿಗೆ ಖ್ಯಾತಿ ತಂದಿವೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆಸ್ಪತ್ರೆ ಭೇಟಿ ನೀಡಿದ್ದಾರೆ. ಚಿಟ್ಟಾಣಿಯವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರ ಮಕ್ಕಳು ತಿಳಿಸಿದ್ದಾರೆ