FILM
ಬಿಗ್ ಬಾಸ್ ಮನೆಯಲ್ಲಿ ಕಸಕ್ಕೆ ಸಮಾನರಾದ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ
ಬೆಂಗಳೂರು ಡಿಸೆಂಬರ್ 22: ಬಿಗ್ ಬಾಸ್ ಸೀಸನ್ 11 ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನು ಕೆಲವು ವಾರಗಳ ಬಿಗ್ ಬಾಸ್ ಗೆ ತೆರೆ ಬಿಳುವ ಸಾಧ್ಯತೆ ಇದೆ. ಈ ನಡುವೆ ಹೊರಗಡೆ ಹಿಂದೂ ಫೈರ್ ಬ್ರ್ಯಾಂಡ್ ಎಂದು ಕರೆಯುತ್ದಿದ್ದ ಚೈತ್ರಾ ಮಾತ್ರ ಬಿಗ್ ಬಾಸ್ ಗೆ ಹೋಗಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡ ಹಾಗೆ ಆಗಿದೆ.
ಕಿಚ್ಚ ಸುದೀಪ್ ಅವರಿಂದ ಹೆಚ್ಚಾಗಿ ಕ್ಲಾಸ್ ತೆಗೆದುಕೊಂಡ ಅಭ್ಯರ್ಥಿಯಾಗಿ ಚೈತ್ರಾ ಕುಂದಾಪುರ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಮಾತ್ರ ನಾಮಿನೇಷನ್ಗೆ ಸಂಬಂಧಿಸಿದ ಪ್ರಕ್ರಿಯೆ ನಡೆಯಲಿದ್ದು, ಮನೆಮಂದಿಯಲ್ಲಾ ಚೈತ್ರಾ ಕುಂದಾಪುರ ಅವರನ್ನು ಕಸಕ್ಕೆ ಹೋಲಿಸಿ ಮಾತನಾಡಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ ಪ್ರೋಮೋ ದಲ್ಲಿ ಬಿಗ್ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ. ಬಿಗ್ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರನ್ನು ಆ ಬುಟ್ಟಿಗೆ ಹಾಕಬೇಕು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳುತ್ತಾರೆ. ಹನುಮಂತು, ಮೋಕ್ಷಿತಾ, ರಜತ್ ಇನ್ನೂ ಕೆಲವರು ಚೈತ್ರಾ ಕುಂದಾಪುರ ಅವರನ್ನು ಅಮಾನುಷವಾಗಿ ಕಸಕ್ಕೆ ಹೋಲಿಸಿದ್ದು, ಅವರ ಎದರೇ ಚೈತ್ರಾ ಚಿತ್ರವನ್ನು ಕಸದ ಬ್ಯಾಗಿಗೆ ಅಂಟಿಸಿ ಅದನ್ನು ಕಸದ ಡಬ್ಬಿಗೆ ಹಾಕಿದ್ದಾರೆ. ಮನೆಯ ಸದಸ್ಯರು ಎಲ್ಲರೆದುರು ತಮ್ಮನ್ನು ಕಸಕ್ಕೆ ಹೋಲಿಸಿದ್ದು ಕಂಡು ಚೈತ್ರಾ ಆಘಾತಕ್ಕೆ ಒಳಗಾಗಿದ್ದಾರೆ.
ಕಳಸಿ ಆಚೆ ಇನ್ನು ಸಾಕು ಸುದೀಪ್ ಅವರಿಗೂ ಇರಿಟೇಷನ್ ಆಗಿದಾರೆ ಇವರು , ಜನರಿಗೆ ಅಂತೂ #BBK11pic.twitter.com/jhD1sC0Rb4
— ಸಿನಿ_ಚಿಂತಕ (@CineChintaka) December 22, 2024