Connect with us

    LATEST NEWS

    30 ನಿಮಿಷದಲ್ಲಿ 30 ಕೆಜಿ ಕಿತ್ತಳೆ ತಿಂದ ಸ್ನೇಹಿತರು!

    ಬೀಜಿಂಗ್, ಜನವರಿ 28​: ಪ್ರಪಂಚದಲ್ಲಿ ಎಂತಾ ವಿಚಿತ್ರ ಜನರಿರುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಚೀನಾದ ನಾಲ್ವರು ಸ್ನೇಹಿತರು ಕೇವಲ 30 ನಿಮಿಷಗಳಲ್ಲಿ 30 ಕೆಜಿ ಕಿತ್ತಳೆ ಹಣ್ಣನ್ನು ತಿಂದು ಮುಗಿಸಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ನೀವು ನಗುವುದು ಗ್ಯಾರಂಟಿ.

    ಆ ನಾಲ್ವರು ಮೊದಲಿನಿಂದಲೂ ಸ್ನೇಹಿತರಂತೆ. ಇತ್ತೀಚೆಗೆ ಚೀನಾದಲ್ಲಿಯೇ ಯಾವುದೋ ಒಂದು ಸ್ಥಳಕ್ಕೆ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿಂದ ಮನೆಗೆ ವಾಪಾಸಾಗಲು ವಿಮಾನದ ಟಿಕೆಟ್​ ಬುಕ್​ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ ಮನೆಯವರಿಗೆಂದು 30 ಕೆಜಿ ಕಿತ್ತಳೆ ಹಣ್ಣಿನ ಬಾಕ್ಸ್​ ತೆಗೆದುಕೊಂಡು ಹೊರಟಿದ್ದಾರೆ. ಆದರೆ ವಿಮಾನಗಳಲ್ಲಿ ಒಬ್ಬರಿಗೆ ಅಷ್ಟೊಂದು ಸಾಮಾಗ್ರಿ ಹೊತ್ತೊಯ್ಯಲು ಅವಕಾಶವಿಲ್ಲ. ಅದಕ್ಕೆ ಹೆಚ್ಚಿನ ಹಣ ತೆರಬೇಕಾಗುತ್ತದೆ. ಅದೇ ರೀತಿಯಲ್ಲಿ ಆ 30 ಕೆಜಿ ಲಗೇಜ್​ಗೆ 300 ಯುವಾನ್​ ಅಂದರೆ 3,384 ರೂಪಾಯಿ ಶುಲ್ಕ ವಿಧಿಸುವುದಾಗಿ ತಿಳಿಸಲಾಗಿದೆ.

    ಅಯ್ಯೋ, ಹಣ್ಣಿಗೆ ಇಷ್ಟೊಂದು ದುಡ್ಡು ಕೊಡಬೇಕಲ್ಲಾ ಎಂದು ಯೋಚಿಸಿದ ಸ್ನೇಹಿತರು ಒಂದು ಉಪಾಯ ಹುಡುಕಿದ್ದಾರೆ. 30 ಕೆಜಿ ಹಣ್ಣನ್ನು ಇಲ್ಲಿಯೇ ತಿಂದು ಮನೆಗೆ ಹೋಗೋಣ ಎಂದು ಪ್ಲ್ಯಾನ್​ ಮಾಡಿದ್ದಾರೆ. ಅದರಂತೆ ಅದನ್ನು ವಿಮಾನ ನಿಲ್ದಾಣದಲ್ಲಿಯೇ ಕುಳಿತು ತಿಂದಿದ್ದಾರೆ. ಕೇವಲ 20-30 ನಿಮಿಷಗಳಲ್ಲಿ ಅಷ್ಟೂ ಹಣ್ಣನ್ನು ತಿಂದು ಮುಗಿಸಿದರಂತೆ. ಆಮೇಲೆ ವಿಮಾನದಲ್ಲಿ ಅರಾಮವಾಗಿ ಪ್ರಯಾಣಿಸಿದರಂತೆ.

    ಈ ಸುದ್ದಿ ಚೀನಾದ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. 30 ಕೆಜಿಯನ್ನ ನಾಲ್ಕು ಜನರು ಭಾಗ ಮಾಡಿಕೊಂಡು ತೆಗೆದುಕೊಂಡು ಬಂದಿದ್ದರೆ ಹೆಚ್ಚುವರಿ ಖರ್ಚು ಆಗುತ್ತಲೇ ಇರಲಿಲ್ಲ. ಅದೆಷ್ಟು ದಡ್ಡರಿರಬೇಕು ಅವರು ಎಂದು ಅಲ್ಲಿನ ನೆಟ್ಟಿಗರು ಸ್ನೇಹಿತರ ಕಾಲೆಳೆಯಲಾರಂಭಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply