Connect with us

DAKSHINA KANNADA

35 ಲಕ್ಷದ ಚಿನ್ನಾಭರಣ ಗಿಫ್ಟ್‌ ಆಸೆಗೆ 1.35 ಲಕ್ಷ ಕಳೆದುಕೊಂಡ ಮಂಗಳೂರು ವ್ಯಕ್ತಿ..!

ಮಂಗಳೂರು, ಜನವರಿ 28: 35 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ 1.35 ಲಕ್ಷ ರೂ. ತನ್ನ ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿದ ಪ್ರಕರಣ ನಡೆದಿದೆ.

ಜ.3ರಂದು ರೆನಾಲ್ಟ್‌ ಫ್ರಿನ್ಸ್‌ ಕ್ರಿಸ್ಟಫರ್‌ ಎಂಬಾತ ಫೇಸ್‌ಬುಕ್‌ ಮೂಲಕ ಪರಿಚಯವಾಗಿ ಚಾಟಿಂಗ್‌ ನಡೆಸುತ್ತಿದ್ದ. ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದುದರಿಂದ ಚಿನ್ನ, ವಜ್ರಾಭರಣಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಹೇಳಿ ನಂಬಿಸಿದ್ದ. ಇದಾಗಿ ಜ.18ರಂದು ದಿಲ್ಲಿ ಕಸ್ಟಮ್ಸ್‌ ಆಫೀಸರ್‌ ಎಂದು ಹೇಳಿ ಮಹಿಳೆಯೊಬ್ಬಳು ಕರೆ ಮಾಡಿದ್ದಳು. ಏರ್‌ಪೋರ್ಟ್‌ಗೆ ಒಂದು ಪಾರ್ಸೆಲ್‌ ಬಂದಿದ್ದು, ಅದಕ್ಕೆ ಡೆಲಿವರಿ ಚಾರ್ಜ್‌ 30 ಸಾವಿರ ರೂ. ನೀಡುವಂತೆ ಕೋರಿದ್ದಳು.

ಜ.20ರಂದು ಮತ್ತೆ ಕರೆ ಬಂದಿದ್ದು, ಮಹಿಳೆಯು ವಿವಿಧ ಕಾರಣಗಳನ್ನು ತಿಳಿಸಿ 1.05 ಲಕ್ಷ ರೂ. ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದಳು. ಒಟ್ಟಾರೆ ಹಂತ ಹಂತವಾಗಿ ಒಟ್ಟು 1.35 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಗರದ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.