Connect with us

    LATEST NEWS

    ವುಹಾನ್​ನಿಂದ ಕರೊನಾ ವರದಿ ಮಾಡಿದ್ದ ಮಹಿಳೆಗೆ ನಾಲ್ಕು ವರ್ಷ ಜೈಲು ಶಿಕ್ಷೆ…!

    ಬೀಜಿಂಗ್​, ಡಿಸೆಂಬರ್‌ 28:  ಚೀನಾದಲ್ಲಿ ಕೊರೊನದ ವಾಸ್ತವವನ್ನಯ ಬಯಲಿಗೆಳೆದ ಪತ್ರಕರ್ತೆ ಯನ್ನು ಬಂಧಿಸಿ ಶಿಕ್ಷಿಸಿದೆ. ಚೀನಾದ ವುಹಾನ್​ ನಗರದಿಂದ ಹಬ್ಬಲಾರಂಭಿಸಿದ ಕರೊನಾ ಕುರಿತಾಗಿ ವರದಿ ತಯಾರಿಸಿ ಬಹಿರಂಗ ಪಡಿಸಿದ ಮಹಿಳೆಗೆ ಚೀನಾ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ವರದಿ ಮಾಡಿದ ಜಾಂಗ್  37 ವರ್ಷದ ವಕೀಲರಾಗಿದ್ದು, ಫೆಬ್ರವರಿಯಲ್ಲಿ ವುಹಾನ್​ ನಗರದಿಂದ ನೇರ ವರದಿ ನೀಡುವ ಪ್ರಯತ್ನ ಮಾಡಿದ್ದರು. ಅಲ್ಲಿನ ಪರಿಸ್ಥಿತಿ ಯಾವ ರೀತಿಯಲ್ಲಿದೆ, ಅಲ್ಲಿ ಕರೊನಾ ಬಂದವರಿಗೆ ಯಾವ ರೀತಿಯಲ್ಲಿ ಹಿಂಸಿಸಲಾಗುತ್ತಿದೆ ಎನ್ನುವ ವರದಿಯನ್ನು ಮಾಡಿದ್ದರು. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದ್ದವು. ಈ ರೀತಿ ವರದಿ ಮಾಡಿದ ಪತ್ರಕರ್ತರನ್ನು ಚೀನಾ ಯಾವ ರೀತಿಯಲ್ಲಿ ಹಲ್ಲೆ ನಡೆಸಿ, ಕಾಣೆ ಮಾಡಿಸುತ್ತಿದೆ ಎನ್ನುವುದರ ಬಗ್ಗೆಯೂ ಆಕೆ ವರದಿ ಮಾಡಿದ್ದರು.

    ಈ ರೀತಿ ವರದಿ ಮಾಡಿ ಮೂರೇ ತಿಂಗಳಲ್ಲಿ ಅಂದರೆ ಮೇ ತಿಂಗಳಲ್ಲಿ ಜಾಂಗ್​ ಕಾಣೆಯಾಗಿದ್ದರು. ಅದಾದ ನಂತರ ಆಕೆಯನ್ನು ಬಂಧಿಸಿರುವುದಾಗಿ ಚೀನಾ ಹೇಳಿತ್ತು. ಇದೀಗ ಜಾಂಗ್​ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದು, ಸುಳ್ಳು ಮಾಹಿತಿ ನೀಡಿರುವ ಆರೋಪದಡಿಯಲ್ಲಿ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಜಾಂಗ್​ ತಮ್ಮ ಹೋರಾಟದ ಹಾದಿಯಾಗಿ ಕೆಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply