Connect with us

  LATEST NEWS

  ಚಿಲಿಂಬಿ ಗುಡ್ಡೆ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್‌ ಶಿಲಾನ್ಯಾಸ

  ಮಂಗಳೂರು: ಮುಖ್ಯರಸ್ತೆಯನ್ನು ಚಿಲಿಂಬಿ ಗುಡ್ಡೆಗೆ ಸಂಪರ್ಕಿಸುವಂತಹ ರಸ್ತೆಯ ಮುಂದುವರಿದ ಕಾಮಗಾರಿಗೆ ಪಿಡಬ್ಲ್ಯುಡಿ ಇಲಾಖೆಯ ಮೂಲಕ ಅನುದಾನ ಒದಗಿಸಲಾಗಿದೆ. ಈ ಹಿಂದೆ ಇಂಟರ್‍‌ಲಾಕ್‌ ಅಳವಡಿಸಿದ್ದ ಈ ರಸ್ತೆಗೆ ಹೊಸದಾಗಿ ಕಾಂಕ್ರಿಟೀಕರಣ ಮತ್ತು ಚರಂಡಿ ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದು, ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿತು. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಯೋಜನೆಯ ವಿವರಗಳನ್ನು ನೀಡಿದರು.

  ಈ ಕಾಮಗಾರಿಗಳು ಸಂಪೂರ್ಣ ಯಶಸ್ವಿಯಾಗಬೇಕು. ಕಾಮಗಾರಿ ಆರಂಭವಾದ ಬಳಿಕ ಈ ಭಾಗದ ನಿವಾಸಿಗಳಿಗೆ ತಾತ್ಕಾಲಿಕವಾಗಿ ಕೆಲವು ತೊಂದರೆಗಳಾಗಬಹುದು. ಆ ನಿಟ್ಟಿನಲ್ಲಿ ಸ್ಥಳೀಯ ನಿವಾಸಿಗಳು ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು.ಈ ಭಾಗದ ಕಾರ್ಯಕರ್ತರು ಗಮನ ಸೆಳೆದು ಸಲ್ಲಿಸಿದ ಕೋರಿಕೆಯಂತೆ ಈ ಕಾಮಗಾರಿಗೆ ಅನುಮೋದನೆ ಹಾಗೂ ಹಣಕಾಸು ಮಂಜೂರು ಮಾಡಲಾಗಿದೆ. ಇದರ ಸದ್ಬಳಕೆಯಾಗಿ ಜನತೆಗೆ ಅನುಕೂಲವಾಗಬೇಕು ಎಂದು ಕಾಮತ್‌ ನುಡಿದರು.

   

   

   

  Share Information
  Advertisement
  Click to comment

  You must be logged in to post a comment Login

  Leave a Reply