Connect with us

    LATEST NEWS

    ಚಿಲಿ – ರಸ್ತೆ ಮೇಲೆ ತೆರಳುತ್ತಿದ್ದ ಕಾರಿನ ಮೇಲೆ ಬಿದ್ದ ವಿಮಾನ – ವಿಡಿಯೋ ವೈರಲ್

    ಚಿಲಿ ಜನವರಿ 17: ಬೆಂಕಿ ನಂದಿಸುವ ಅಗ್ನಿಶಾಮಕದಳ ಸಣ್ಣ ವಿಮಾನವೊಂದು ರಸ್ತೆಯ ಬದಿಯಲ್ಲಿರುವ ಕೇಬಲ್ ಗೆ ತಾಗಿದ ಪರಿಣಾಮ ರಸ್ತೆ ಮೇಲೆ ಅಪ್ಪಳಿಸಿದ ಘಟನೆ ಚಿಲಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.ಈ ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿ ಮತ್ತು ರಸ್ತೆ ಮೇಲೆ ಸಂಚರಿಸುತ್ತಿದ ಕೆಲವು ವಾಹನಗಳಿಗೆ ಹಾನಿಯಾಗಿದೆ.

    ರಾಜಧಾನಿ ಸ್ಯಾಂಟಿಯಾಗೊದ ದಕ್ಷಿಣದಲ್ಲಿರುವ ತಾಲ್ಕಾ ನಗರದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿರು ಬೆಂಕಿ ನಂದಿಸುವ ಕಾರ್ಯವನ್ನು ಈ ವಿಮಾನ ಮಾಡುತ್ತಿತ್ತು, ಈ ವೇಳೆ ರಸ್ತೆ ಬದಿಯಲ್ಲಿರುವ ಕರೆಂಟ್ ಕೇಬಲ್ ಗೆ ವಿಮಾನ ತಾಗಿದ್ದು, ಸೀದಾ ರಸ್ತೆ ಮೇಲೆ ಸಂಚರಿಸುತ್ತಿದ್ದ ಕಾರಿನ ಮೇಲೆ ಪತನಗೊಂಡಿದೆ.

    ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಘಟನೆಯಲ್ಲಿ ಪೈಲೆಟ್ ಸಾವನಪ್ಪಿದ್ದಾನೆ ಎಂದು ವರದಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply