DAKSHINA KANNADA
ಶ್ರೀ ಕ್ಷೇತ್ರ ಕುಕ್ಕೆಯಲ್ಲಿ ಕಳಕೊಂಡ 50 ಸಾವಿರ ಹಣವನ್ನು ವಾರಿಸುದಾರ ಭಕ್ತನಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ 5 ವರ್ಷದ ಬಾಲೆ..!

ಕುಕ್ಕೆ ಸುಬ್ರಹ್ಮಣ್ಯ: ಭಕ್ತರೊಬ್ಬರು ಕಳೆದುಕೊಂಡ ಹಣದ ಬಂಡಲನ್ನು ಐದರ ಹರೆಯದ ಬಾಲಕಿಯೊಬ್ಬಳ ಪ್ರಾಮಾಣಿಕತೆಯಿಂದ ವಾರಿಸುದಾರರ ಕೈ ಸೇರುವಂತಾದ ಘಟನೆ ದಕ್ಷಿಣ ಕನ್ನಡದ ಪುರಾಣ ಪ್ರಸಿದ್ದ ಕ್ಷೇತ್ರ ಕುಕ್ಕೆ ಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಶ್ರೀಧರ ಎಂಬವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಕೆ ತೀರಿಸಲು ಬಂದಿದ್ದರು.ಈ ಸಂದರ್ಭ ತಮ್ಮ ಬ್ಯಾಗ್ ನಲ್ಲಿದ್ದ ಸುಮಾರು ಐವತ್ತು ಸಾವಿರ ನೋಟಿನ ಕಂತೆ ಆಕಸ್ಮಿಕವಾಗಿ ಬಿದ್ದು ಹೋಗಿತ್ತು. ದೇಗುಲದ ಜಮಾ ಉಗ್ರಣ ಬಳಿ ಇರುವ ಹಣ್ಣು ಕಾಯಿ ಅಂಗಡಿ ಬಳಿಯಲ್ಲಿ ಬಿದ್ದಿದ್ದ ಈ ನೋಟಿನ ಕಂತೆ ಪಂಜ ಚಿಮುಳ್ಳು ನಿವಾಸಿ ಚದ್ರಾವತಿ ಎಂಬ ಐದು ವರ್ಷದ ಪುಟಾಣಿ ಕೈಗೆ ಸಿಕ್ಕಿದೆ .ತಕ್ಷಣ ವಾರಿಸುದಾರರ ಮಾಹಿತಿ ಪಡೆದ ಬಾಲಕಿಯ ಪೋಷಕರು ಸ್ಥಳೀಯ ಹಣ್ಣುಕಾಯಿ ಅಂಗಡಿ ಮಾಲೀಕರ ಸಮ್ಮುಖದಲ್ಲಿ ಹಣ ಕಳಕೊಂಡ ಭಕ್ತನಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
