LATEST NEWS
ಚಿಕ್ಕಮಗಳೂರು: ದತ್ತಪೀಠದ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ ಮಾಡಿದ ಆರೋಪ, ಮುಸ್ಲಿಂ ಮುಖಂಡರಿಂದ ಪ್ರತಿಭಟನೆ..!
ಡಿಸೆಂಬರ್ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಆಯೋಜನೆಯಾಗಿದ್ದು ದತ್ತ ಪೀಠ ದ ಸ್ಥಳವನ್ನು ಸಂಪೂರ್ಣ ಹಿಂದೂ ಧರ್ಮಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಡಿಸೆಂಬರ್ 6 ರಿಂದ 14 ರ ವರೆಗೆ ನಡೆಯಲಿರುವ ದತ್ತ ಜಯಂತಿ ನಡೆಯಲಿದೆ. ಇದೇ ವೇಳೆ ಹೊಸ ವಿವಾದ ಸೃಷ್ಟಿಯಾಗಿದೆ.
ಚಿಕ್ಕಮಗಳೂರು: ಡಿಸೆಂಬರ್ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಆಯೋಜನೆಯಾಗಿದ್ದು ದತ್ತ ಪೀಠ ದ ಸ್ಥಳವನ್ನು ಸಂಪೂರ್ಣ ಹಿಂದೂ ಧರ್ಮಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಡಿಸೆಂಬರ್ 6 ರಿಂದ 14 ರ ವರೆಗೆ ನಡೆಯಲಿರುವ ದತ್ತ ಜಯಂತಿ ನಡೆಯಲಿದೆ. ಇದೇ ವೇಳೆ ಹೊಸ ವಿವಾದ ಸೃಷ್ಟಿಯಾಗಿದೆ.
ವಿವಾದಿತ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾದ ಗುಹೆಯೊಳಗಿನ ಗೋರಿಗಳ ಮೇಲೆ ಕುಂಕುಮ ಹಚ್ಚಿ ಪೂಜೆ ಮಾಡಿದ ಆರೋಪ ಕೇಳಿ ಬಂದಿದೆ. ಇದು ಇಸ್ಲಾಂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಖಾದ್ರಿ ಕುಟುಂಬಸ್ಥರು ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವಿವಾದಿತ ಗುಹೆಯೊಳಗಿನ ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ ಪೂಜೆ ಮಾಡಿದ್ದಾರೆ. ಇದು ಮುಸ್ಲಿಂ ಸಮುದಾಯಕ್ಕೆ ವಿರುದ್ದವಾಗಿದೆ ಎಂದು ಶಾಖಾದ್ರಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ಬಂದ ಮುಜರಾಯಿ ಇಲಾಖೆಯ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಸಿ.ಟಿ ರವಿ ದಾಖಲೆಯ ಪ್ರಕಾರ ಅದು ದತ್ತಾತ್ರೇಯ ಸ್ವಾಮಿಗಳಿರುವ ಜಾಗವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಗೋರಿ ಕಟ್ಟಿರುವುದು ಅಪರಾಧ. ಮೊದಲು ಗೋರಿಗಳನ್ನು ಎತ್ತಿಕೊಂಡು ಹೋಗಬೇಕು. ಹಿಂದೂಗಳ ಎಂಡೋಮೆಂಟ್ನಲ್ಲಿ ,ದತ್ತಾತ್ರೇಯ ದೇವರ ಹೆಸರಿನ ಜಾಗದಲ್ಲಿ ಗೋರಿ ಕಟ್ಟಿ ಅಪರಾಧ ಮಾಡಲಾಗಿದೆ ಎಂದು ಹೇಳಿದ್ದಾರೆ. ಗೋರಿ ಅಂತ ಜಗಳಕ್ಕೆ ಬರುವವರು, ಗೋರಿಗಳನ್ನು ತೆಗೆದುಕೊಂಡು ನಾಗೇನಹಳ್ಳಿಗೆ ಹೋಗಲಿ. ತೆಗೆದುಕೊಂಡು ಹೋಗ ಬೇಕಿರುವುದು ಕುಂಕುಮ ಅಲ್ಲ, ಗೋರಿಗಳನ್ನು. ಬಾಬಾ ಬುಡನ್ ದರ್ಗಾ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿದೆ. ದತ್ತಾತ್ರೇಯ ಪೀಠ ಸರ್ವೆ ನಂಬರ್ 198 ರಲ್ಲಿದೆ. ಅವರು ಗೋರಿಗಳನ್ನ ಸರ್ವೇ ನಂಬರ್ 57ರ ಬಾಬಾ ಬುಡನ್ ದರ್ಗಾಕ್ಕೆ ತೆಗೆದುಕೊಂಡು ಹೋಗಲಿ. ಬಾಬಾ ಬುಡನ್ ದರ್ಗಾ ಇರುವ ಜಾಗದಲ್ಲಿ ದತ್ತ ಪಾದುಕೆ ಇದ್ದರೆ ನಾವು ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.