Connect with us

    KARNATAKA

    ಚಿಕ್ಕಬಳ್ಳಾಪುರ -ಭೀಕರ ರಸ್ತೆ ಅಪಘಾತಕ್ಕೆ ಟಾಟಾ ಸುಮೋದಲ್ಲಿ 13 ಮಂದಿ ಸಾವು

    ಚಿಕ್ಕಬಳ್ಳಾಪುರ ಅಕ್ಟೋಬರ್ 26: ರಸ್ತೆಯಲ್ಲಿ ನಿಂತಿದ್ದ ಟ್ಯಾಂಕರ್ ಗೆ ಟಾಟಾಸುಮೋ ಒಂದು ಡಿಕ್ಕಿ ಹೊಡೆದ ಪರಿಣಾಮ ಒಂದು ಪುಟ್ಟಮಗು ಸೇರಿದಂತೆ 13 ಮಂದಿ ಸಾವನಪ್ಪಿದ ಘಟನೆ ಚಿಕ್ಕಬಳ್ಳಾಪುರದ ಹೊರವಲಯದ ಚಿತ್ರಾವತಿ ಬಳಿಯ ಸಂಚಾರ ಠಾಣೆ ಎದುರು ಬೆಳಿಗ್ಗೆ 7ರ ಸುಮಾರಿಗೆ ನಡೆದಿದೆ.


    ಆಂಧ್ರಪ್ರದೇಶ ನೋಂದಣಿಯ ಟಾಟಾ ಸುಮೋ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಟಾಟಾ ಸುಮೊದಲ್ಲಿದ್ದ 13 ಜನರು ಆಂಧ್ರಪ್ರದೇಶದಿಂದ ಬೆಂಗಳೂರಿನತ್ತ ಬರುತ್ತಿದ್ದರು.

    ವಾಹನದಲ್ಲಿ ಇದ್ದ ಎಲ್ಲರೂ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಂದು ಮಗು, ಮೂವರು ಮಹಿಳೆಯರು, ಎಂಟು ಮಂದಿ ಪುರುಷರು ಮೃತರಾಗಿದ್ದಾರೆ. ಮೃತರೆಲ್ಲ ಕೂಲಿಕಾರರಾಗಿದ್ದು, ಆಂಧ್ರಪ್ರದೇಶದ ಗೊರಂಟ್ಲ, ಪೆನುಗೊಂಡದವರು ಎಂದು ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply