LATEST NEWS
ತಮಿಳುನಾಡು – ಜೀವಂತ ಮೀನು ಗಂಟಲಲ್ಲಿ ಸಿಲುಕಿ ಜೀವ ಬಿಟ್ಟ ಯುವಕ

ಚೆನ್ನೈ ಎಪ್ರಿಲ್ 10: ಕೆರೆಯಲ್ಲಿ ಮೀನು ಹಿಡಿಯುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದ ಜೀವಂತ ಮೀನು ಸೀದಾ ಗಂಟಲೊಳಗೆ ಸಿಲುಕಿದ ಪರಿಣಾಮ ಯುವಕನೊಬ್ಬ ಸಾವನಪ್ಪಿದ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು ಅರಯಪಕ್ಕಂ ಗ್ರಾಮದ ಮಣಿಗಂಡನ್(29) ಎಂದು ಗುರುತಿಸಲಾಗಿದೆ.
ಮಣಿಗಂಡನ್ ದಿನಗೂಲಿ ನೌಕರನಾಗಿದ್ದು, ಮೀನು ಹಿಡಿಯುವುದರಲ್ಲಿ ಪಳಗಿದ್ದ, ಎಂದಿನಂತೆ ಊರ ಸಮೀಪ ಇದ್ದ ಕಿಳವಳಂ ಎಂಬ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾನೆ. ಈ ವೇಳೆ ಒಂದು ಮೀನನ್ನು ಕೈಯಲ್ಲಿ ಹಿಡಿದ ಮಣಿಗಂಡನ್ ಇನ್ನೊಂದು ಮೀನು ಹಿಡಿಯುವ ಸಲುವಾಗಿ ಮೀನನ್ನು ಹಿಡಿದ ಮೀನನ್ನು ಬಾಯಲ್ಲಿ ಕಚ್ಚಿಕೊಂಡಿದ್ದಾನೆ. ಬಳಿಕ ಕೆರೆಯಲ್ಲಿದ್ದ ಮತ್ತೊಂದು ಮೀನು ಹಿಡಿಯಲು ಹೋಗಿದ್ದಾನೆ, ಈ ವೇಳೆ ಬಾಯಲ್ಲಿ ಕಚ್ಚಿದ್ದ ಮೀನು ಸೀದಾ ಮಣಿಗಂಡನ್ ಅವನ ಬಾಯಿ ಒಳಗೆ ಹೋಗಿದೆ. ಮೀನು ಸೀದಾ ಹೋಗಿ ಶ್ವಾಶನಾಳದಲ್ಲಿ ಸಿಕ್ಕಿಕೊಂಡಿದೆ. ಈ ವೇಳೆ ಮಣಿಗಂಡನ್ ಗೆ ಉಸಿರಾಡಲು ತೊಂದರೆಯಾಗಿದ್ದು, ಮೀನನ್ನು ತೆಗೆಯಲು ಯತ್ನಿಸಿದ್ದಾನೆ. ಆದರೆ ಮೀನು ಮಾತ್ರ ಹೊರಗೆ ಬರಲಿಲ್ಲ. ಕೂಡಲೇ ನೀರಿನಂದ ಹೊರಗೆ ಬಂದ ಮಣಿಗಂಡನ್ ತನ್ನ ಮನೆಯ ಹತ್ತಿರ ಹೋಗಿದ್ದಾನೆ. ಮನೆ ಸಮೀಪಿಸುತ್ತಿದ್ದಂತೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಅವನು ಸಾವನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ತಮಿಳಿನಲ್ಲಿ ಪನಂಗೊಟ್ಟೈ ಎಂದು ಕರೆಯಲ್ಪಡುವ ಮೀನು ಇದಾಗಿದ್ದು, ಮಣಿಗಂಡನ್ ಅವನ ಶಾಸಕೋಶ ನಾಳದಲ್ಲಿ ಮೀನಿನ ರೆಕ್ಕೆಗಳು ಸಿಕ್ಕಿಹಾಕೊಂಡಿತ್ತು, ಆದ್ದರಿಂದ ಎಷ್ಟೇ ಪ್ರಯತ್ನಪಟ್ಟಲು ಮೀನನ್ನು ತೆಗೆಯಲು ಆಗಲಿಲ್ಲ ಎಂದು ಹೇಳಲಾಗಿದೆ. ಮೀನು ಹಿಡಿಯುವುದರಲ್ಲಿ ಪರಿಣಿತಿ ಹೊಂದಿದ್ದ ಮಣಿಗಂಡನ್ , ಮೀನು ಹಿಡಿಯಲು ತನ್ನ ಸ್ನೇಹಿತರೊಂದಿಗೆ ಯಾವಾಗಲೂ ಹೋಗುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ದುರ್ಘಟನೆ ನಡೆದ ದಿನ ತಾನೊಬ್ಬನೆ ಹೋಗಿದ್ದ ಇದರಿಂದಾಗಿ ಘಟನೆ ನಡೆದಾಗ ಮಣಿಗಂಡನ್ ರಕ್ಷಣೆಗೆ ಯಾರೂ ಇರಲಿಲ್ಲ.ಜೀವಂತ ಮೀನನ್ನು ಬಾಯಲ್ಲಿ ಇಟ್ಟುಕೊಂಡು ಸರ್ಕಸ್ ಮಾಡಲು ಹೋಗಿ ಯುವಕ ಜೀವವನ್ನೇ ಕಳೆದುಕೊಂಡಿದ್ದಾನೆ.
1 Comment