DAKSHINA KANNADA
ಭೂವ್ಯವಹಾರದಲ್ಲಿ ಕಮೀಷನ್ ನೀಡದೆ ವಂಚನೆ ಆರೋಪ – ದೂರು

ಭೂವ್ಯವಹಾರದಲ್ಲಿ ಕಮೀಷನ್ ನೀಡದೆ ವಂಚನೆ ಆರೋಪ – ದೂರು
ಪುತ್ತೂರು: ಭೂವ್ಯವಹಾರಕ್ಕೆ ಸಂಬಂಧಿಸಿ ಕಮೀಷನ್ ನೀಡದೆ ವಂಚನೆ ಮಾಡಿದ ಕುರಿತು ವ್ಯಕ್ತಿಯೊಬ್ಬರು ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಡಿ’ಕೋಸ್ಟ, ಜೇಮ್ಸ್, ರಿತೇಶ್ ಪಾಯಸ್ ಅವರ ವಿರುದ್ಧ ದರ್ಬೆ ನಿವಾಸಿ ಸದಾಶಿವ ಪೈ ಅವರು ದೂರು ನೀಡಿದ್ದಾರೆ.

ಡಿ’ಕೋಸ್ಟ ಎಂಬವರ ಜಾಗೆಯನ್ನು ಜೇಮ್ಸ್ ಅವರು ಮಾರಾಟ ಮಾಡುವ ಕುರಿತು ನನ್ನಲ್ಲಿ ಪ್ರಸ್ತಾಪಿಸಿದ್ದಂತೆ ನಾನು ರಿತೇಶ್ ಪಾಯಸ್ ಅವರಿಗೆ ಜಾಗೆ ತೋರಿಸಿ ಮಾರಾಟಕ್ಕೆ ಕೇಳಿಕೊಂಡಿದ್ದೆ.
ಆದರೆ ಬೆಳವಣಿಗೆಯಲ್ಲಿ ನನಗೆ ತಿಳಿಸದೆ ಅವರೊಳಗೆ ಮಾರಾಟ ವ್ಯವಹಾರ ನಡೆಸಿದ್ದು, ನನಗೆ ಜಾಗಾ ಮಾರಾಟದ ಕಮೀಷನ್ ಕೊಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ದೂರು ಸ್ವೀಕರಿಸಿಕೊಂಡಿದ್ದಾರೆ.