ಉತ್ತರಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಗೆ ಲಭಿಸಿತು ಸ್ಟೋಟಕ ಮಾಹಿತಿ……..
ಉತ್ತರಪ್ರದೇಶ, ಅಕ್ಟೋಬರ್ 10: ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರಪ್ರದೇಶದ ಎಸ್.ಐ.ಟಿ ಗೆ ಕುತೂಹಲಕಾರಿ ಮಾಹಿತಿ ಲಭ್ಯವಾಗಿದೆ.

ಪೀಡಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಆರಂಭಿಸಿದ್ದ ಎಸ್.ಐ.ಟಿ ತಂಡಕ್ಕೆ ಈ ಪ್ರಕರಣದಲ್ಲಿ ನಕ್ಸಲ್ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಧ್ಯಪ್ರದೇಶದ ಜಬಲ್ಪುರದ ನಕ್ಸಲ್ ಮಹಿಳೆಯ ಜೊತೆ ಪೀಡಿತ ಯುವತಿಯ ಅತ್ತಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಸ್ಪೋಟಕ ಮಾಹಿತಿ ಎಸ್.ಐ.ಟಿ ಗೆ ದೊರೆತಿದೆ.
ಪೀಡಿತೆ ಯುವತಿಯ ಅತ್ತಿಗೆಯ ಕಾಲ್ ಡೀಟೇಲ್ಸ್ ಪರಿಶೀಲನೆ ನಡೆಸಿದಾಗ ನಕ್ಸಲ್ ಮಹಿಳೆಯ ನಂಟು ಇರುವುದು ಬೆಳಕಿಗೆ ಬಂದಿದೆ.
ಅಲ್ಲದೆ ಈ ಮಹಿಳೆ ಪೀಡಿತೆಯ ಮನೆಗೂ ಆಗಮಿಸಿ ಮಾದ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾಳೆ. ದಿನಪೂರ್ತಿ ಮುಖಪರದೆಯನ್ನು ಹಾಕಿಕೊಂಡೇ ಇದ್ದ ಈ ನಕ್ಸಲ್ ಮಹಿಳೆ ಪೋಲೀಸರ ಮುಂದೆಯೇ ಘಟನೆ ನಡೆದ ಬಳಿಕವೂ ಇದ್ದಳೆನ್ನಲಾಗಿದೆ.
ಹತ್ರಾಸ್ ನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಸತ್ಯಗಳು ಹೊರ ಬರುತ್ತಿದೆ.
ಈ ಪ್ರಕರಣವನ್ನು ದೇಶದಲ್ಲಿ ಹೇಗೆ ಬಿಂಬಿಸಲಾಗಿತ್ತು ಎನ್ನುವ ಕುರಿತೂ ಇದೀಗ ಉತ್ತರಪ್ರದೇಶ ಸರಕಾರ ತನಿಖೆ ಆರಂಭಿಸಿದೆ.