FILM
ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ -ಚೈತ್ರಾ ಕುಂದಾಪುರ
ಬೆಂಗಳೂರು ಸೆಪ್ಟೆಂಬರ್ 22: ಬಿಗ್ ಬಾಸ್ ಸೀಸನ್ 11 ಈ ಬಾರಿ ಬರೀ ಗಲಾಟೆಯಲ್ಲಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿದ್ದೆ. ನಿರೂಪಕ ಕಿಚ್ಚ ಸುದೀಪ್ ಅವರು ಪಂಚಾಯಿತಿ ಕಟ್ಟೆಯಲ್ಲಿ ಬಿಗ್ ಬಾಸ್ ಮನೆಯವರಿಗೆ ಕ್ಲಾಸ್ ತೆಗೆದುಕೊಂಡ ನಂತರವೂ ಇದೇ ಚಾಳಿಯನ್ನು ಮನೆಮಂದಿ ಮುಂದುವರೆಸುತ್ತಿದ್ದಾರೆ.
ಉಡುಪಿ ಜಿಲ್ಲೆಯಿಂದ ಬಿಗ್ ಬಾಸ್ ಸ್ಪರ್ಧಿಯಾಗಿ ತೆರಳಿರುವ ಚೈತ್ರಾ ಕುಂದಾಪುರ, ತಮ್ಮ ಮಾತಿನಿಂದಲೇ ವಿವಾದಕ್ಕೆ ಸಿಲಕುತ್ತಿದ್ದಾರೆ. ನೇರ ನುಡಿಯ ಚೈತ್ರಾ ಕುಂದಾಪುರ ಮಾತುಗಳು ಕಿಚ್ಚ ಸುದೀಪ್ ಆಕ್ರೋಶಕ್ಕೆ ಕಾರಣವಾಗಿತ್ತು, ಅಲ್ಲದೆ ತನ್ನ ತಪ್ಪನ್ನು ಸರಿ ಮಾಡಿಕೊಳ್ಳುವುದಾಗಿ ಹೇಳಿದ್ದ ಚೈತ್ರಾ ಇದೀಗ ಮತ್ತೆ ನಾಲಿಗೆ ಹರಿಯಬಿಟ್ಟಿದ್ದಾರೆ.
ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್ ಸ್ಟೋರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದರು. ಅದರಿಂದ ಹಂಸಾಗೆ ಬೇಸರ ಆಯಿತು. ಹಾಗಾಗಿ ಅವರು ಈ ವಿಚಾರವನ್ನು ಚೈತ್ರಾ ಕುಂದಾಪುರ ಜೊತೆ ಚರ್ಚೆ ಮಾಡುತ್ತಿದ್ದರು. ಆಗ ಚೈತ್ರಾ ಅವರ ಮಾತುಗಳು ಮೆಟ್ಟಿನ ತನಕ ಹೋಯಿತು. ‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಚೈತ್ರಾ ಕುಂದಾಪುರ ಅವರ ಹೇಳಿದ್ದಾರೆ.