KARNATAKA
ಚೈತ್ರಾ ಕುಂದಾಪುರ ಕೋಟಿ ಕೋಟಿ ಆಸ್ತಿ ಒಡತಿ..!!?
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೂರು ನಾಮ ಹಾಕಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರಾ ಕುಂದಾಪುರ ಕೋಟ್ಯಾಂತರ ಮೌಲ್ಯದ ಆಸ್ತಿ ಒಡತಿ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೂರು ನಾಮ ಹಾಕಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರಾ ಕುಂದಾಪುರ ಕೋಟ್ಯಾಂತರ ಮೌಲ್ಯದ ಆಸ್ತಿ ಒಡತಿ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಈ ಎಲ್ಲಾ ಆಸ್ತಿ, ನಗದನ್ನು ಈಕೆ ತಮ್ಮ ಆಪ್ತನ ಹೆಸರಿನಲ್ಲಿ ಅಕ್ರಮ ಇಟ್ಟಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರಿನ ಶ್ರೀರಾಮ ಸೊಸೈಟಿಯಲ್ಲಿ ಆರೋಪಿ ಶ್ರೀಕಾಂತ್ ಇಟ್ಟಿರುವ ಒಂದು ಕೋಟಿ ರೂ. ಮೌಲ್ಯದ ಬಾಂಡ್, 23 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂ. ನಗದು ಸಿಸಿಬಿ ಪೊಲೀಸರಿಗೆ ಸಿಕ್ಕಿದೆ.
ಈ ಆಸ್ತಿಯನ್ನು ಆರೋಪಿ ಚೈತ್ರಾ, ತನ್ನ ಪರಮಾಪ್ತ ಶ್ರೀಕಾಂತ್ ಹೆಸರಿನಲ್ಲಿಟ್ಟಿದ್ದಾನೆ ಎನ್ನಲಾಗಿದೆ. ಆರೋಪಿ ಶ್ರೀಕಾಂತ್, ವಿಚಾರಣೆ ವೇಳೆ ಚೈತ್ರಾ ಪರವಾಗಿ ಹಣ, ಆಭರಣಗಳನ್ನು ಸೊಸೈಟಿಯಲ್ಲಿಇಟ್ಟಿರುವುದಾಗಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಶ್ರೀರಾಮ ಸೊಸೈಟಿಗೆ ಶ್ರೀಕಾಂತ್‌ನನ್ನು ಕರೆದೊಯ್ದ ಲಾಕರ್ ತೆರೆಸಿದಾಗ ಒಂದು ಕೋಟಿ ರೂ. ಮೌಲ್ಯದ ಬಾಂಡ್, ಆಭರಣ, ನಗದು ಪತ್ತೆಯಾಗಿದ್ದು ಪೊಲೀಸರು ದಂಗಾಗಿದ್ದಾರೆ.
ಶೀಘ್ರದಲ್ಲಿಯೇ ಆಸ್ತಿ, ಹಣ ಜಪ್ತಿಕಾನೂನಿನ ಅನ್ವಯ ಈ ವಸ್ತುಗಳನ್ನು ಜಪ್ತಿ ಮಾಡಲಾಗುವುದು.
ಆರೋಪಿಗಳು ವಂಚನೆ ಹಣದಲ್ಲಿಯೇ ಈ ಆಸ್ತಿ ಸಂಪಾದನೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.
ಎರಡು ಅಂತಸ್ತಿನ ಮನೆ ನಿರ್ಮಾಣ :
ಆರೋಪಿ ಚೈತ್ರಾ ಕುಂದಾಪುರ ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದೆ.
ಜತೆಗೆ, ಅವರು ಹೊಂದಿರುವ ಸ್ಥಿರಾಸ್ತಿ, ಚರಾಸ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ಸ್ವಂತ ಊರಿನಲ್ಲಿ ಚೈತ್ರಾ ಮನೆ ನಿರ್ಮಿಸುತ್ತಿದ್ದು, ಈ ಮನೆ ನಿರ್ಮಾಣಕ್ಕೆ ವೆಚ್ಚ ಮಾಡಿರುವ ಹಣದ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಜಮೀನು ಮತ್ತು ಮನೆಗೆ ಒಟ್ಟು ಒಂದು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.
ಶ್ರೀಕಾಂತ್ ನಾಯಕ್ ಈ ಮನೆಯನ್ನು ಕಟ್ಟಿಸುತ್ತಿದ್ದಾರೋ ಅಥವಾ ಚೈತ್ರಾ ಕುಂದಾಪುರ ಹೂಡಿಕೆ ಮಾಡಿದ್ದಾರೋ ಎಂಬ ವಿಚಾರಗಳು ಇನ್ನಷ್ಟೇ ತನಿಖೆಯಿಂದ ಹೊರ ಬರಬೇಕಾಗಿದೆ.