FILM
ಸಖತ್ ಹಾಟ್ ಅವತಾರದಲ್ಲಿ ನಟಿ ಚೈತ್ರಾ ಆಚಾರ್
ಬೆಂಗಳೂರು ನವೆಂಬರ್ 29: ಸಪ್ತ ಸಾಗರದಾಚೆ ಎಲ್ಲೋ, ಟೋಬಿ ಸಿನೆಮಾಗಳ ಮೂಲಕ ಸುದ್ದಿ ಮಾಡಿರುವ ನಟಿ ಚೈತ್ರಾ ಜೆ ಆಚಾರ್, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಭಿನ್ನ ಪೋಟೋಶೂಟ್ ಗಳಿಂದ ಸದ್ದು ಮಾಡುವ ಅವರ ಇದೀಗ ಮತ್ತೆ ಹಾಟ್ ಅವತಾರ ತಾಳಿರೋದು ಪಡ್ಡೆಹುಡುಗರ ನಿದ್ದೆ ಕೆಡಿಸಿದೆ. ಸಖತ್ ಬೋಲ್ಡ್ ಆಗಿರೋ ಫೋಟೋಶೂಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ಲಾಂಗ್ ಡ್ರೆಸ್‌ನಲ್ಲಿ ನಟಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ನಿಂತಿರುವ ಲುಕ್ ಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಚೈತ್ರಾ ಅವರು ಈ ಹಿಂದೆಯೂ ವಿಭಿನ್ನ ರೀತಿಯಲ್ಲಿ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಪೋಟೋಶೂಟ್ ಗಳು ವೈರಲ್ ಆಗುತ್ತಾ ಇರುತ್ತದೆ. ಚೈತ್ರಾ ತಮಿಳಿನ ಎರಡು ಬಂಪರ್ ಆಫರ್‌ಗಳನ್ನು ಬಾಚಿಕೊಂಡಿದ್ದಾರೆ. ಸ್ಟಾರ್ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಗಳಿಂದ ನಟಿಗೆ ಅವಕಾಶಗಳು ಅರಸಿ ಬರುತ್ತಿವೆ.
ಸಪ್ತಸಾಗರದಾಚೆ ಎಲ್ಲೋ, ‘ಟೋಬಿ’ ಸಿನಿಮಾದಲ್ಲಿ ನಟಿಸಿದ ಮೇಲೆ ಚೈತ್ರಾ ಆಚಾರ್‌ಗೆ ಬೇಡಿಕೆ ಜಾಸ್ತಿಯಾಗಿದೆ. ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅದ್ಭುತವಾಗಿ ನಟಿಸಿದರು.
1 Comment