Connect with us

  LATEST NEWS

  ಕೇಂದ್ರ ಸರಕಾರಿ ನೌಕರರಿಗೆ ಜನವರಿ 22 ರಂದು ಅರ್ಧ ದಿನ ರಜೆ …!!

  ನವದೆಹಲಿ ಜನವರಿ 18: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯುವುದರಿಂದ ಜನರ ಒತ್ತಾಯದ ಮೇರೆಗೆ ಕೇಂದ್ರ ಸರಕಾರ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಿದೆ.

  ದೇಶವೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕಾತರಗೊಂಡಿದೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನ, ಮಠ, ಗುಡಿಗಳು ಅಲಂಕೃತಗೊಂಡಿದೆ. ದೇಶದ ಜನ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ವೀಕ್ಷಿಸಲು, ಶ್ರೀರಾಮ ಭಜನೆ, ಪೂಜೆಯಲ್ಲಿ ತಲ್ಲೀನರಾಗಲು ಬಯಸಿದ್ದಾರೆ. ಭಾರತೀಯರ ಧಾರ್ಮಿಕ ಭಾವನೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ.

  ಈ ಬಗ್ಗೆ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು, ಸಾರ್ವಜನಿಕರಿಂದ ಜನವರಿ 22 ರಂದು ಅಯೋಧ್ಯೆ ರಾಮ ಪ್ರಾಣಪ್ರತಿಷ್ಠಾ ದಿನ ರಜೆ ನೀಡುವಂತೆ ಒತ್ತಾಯ ಕೇಳಿ ಬಂದಿದ್ದು, ಈ ಹಿನ್ನಲೆ ಸಾರ್ವಜನಿಕರ ಭಾವನೆಗಳಿಗೆ ಗಮನದಲ್ಲಿಟ್ಟು ರಾಮಪ್ರತಿಷ್ಠಾ ಕಾರ್ಯಕ್ರಮವನ್ನು ಎಲ್ಲರೂ ನೋಡುವಂತಾಗಲು ಕೇಂದ್ರ ಸರಕಾರ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಂಸ್ಥೆಗಳಿಗೆ ಜನವರಿ 22 ರಂದು  ಮಧ್ಯಾಹ್ನ 2.30 ರ ವರೆಗೆ ರಜೆ ಘೋಷಿಸಿದೆ.

  ಕೇಂದ್ರ ಸರ್ಕಾರ ಅಧೀನದಲ್ಲಿರುವ ಸರ್ಕಾರಿ ಕಚೇರಿಗಳು, ಅಧಿಕಾರಿಗಳು, ಸಂಸ್ಥೆಗಳಿಗೆ ಜನವರಿ 22ರಂದು ಅರ್ಧ ದಿನ ರಜೆ ಘೋಷಿಸಿದೆ. ಈ ಮೂಲಕ ಉದ್ಯೋಗಿಗಳು, ನೌಕರರು ರಾಮ ಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಭಾಗೀದಾರರಾಗಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ.

  ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದ್ದರೆ, ಹಲವು ರಾಜ್ಯಗಳು ಈಗಾಗಲೇ ಜನವರಿ 22ಕ್ಕೆ ರಜೆ ಘೋಷಿಸಿದೆ. 5ಕ್ಕೂ ಹೆಚ್ಚು ರಾಜ್ಯಗಳು ಜನವರಿ 22ರಂದ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಇಷ್ಟೇ ಅಲ್ಲ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಮದ್ಯ ಹಾಗೂ ಮಾಂಸ ಮಾರಾಟ ನಿಷೇಧಿಸಿದೆ.

  Share Information
  Advertisement
  Click to comment

  You must be logged in to post a comment Login

  Leave a Reply