Connect with us

DAKSHINA KANNADA

‘ಕರ್ಣಾಟಕ ಬ್ಯಾಂಕ್’ ನ ಶತಮಾನೋತ್ಸವದ ಸಂಭ್ರಮಾಚರಣೆ, ಬ್ಯಾಂಕಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಸರ್ಕಾರ ಬದ್ದ; ಡಿಸಿಎಂ ಡಿಕೆ ಶಿವಕುಮಾರ್

ಮಂಗಳೂರು :  ಕರಾವಳಿಯ  ಹೆಸರಾಂತ ‘ಕರ್ಣಾ ಟಕ ಬ್ಯಾಂಕ್’ ನ ಶತಮಾನೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮ ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ನೆರವೇರಿತು.

 

ಸಮಾರಂಭದಲ್ಲಿ ಪಾಲ್ಗೊಂಡ ಡಿಸಿಎಂ ಡಿ ಕೆ ಶಿವಕುಮಾರ್ ಶತಮಾನೋತ್ಸವ ಕಟ್ಟಡದ ಉದ್ಘಾಟನೆ ಮತ್ತು ಶತಮಾನೋತ್ಸವದ ಸ್ಮರಣಾರ್ಥವಾಗಿ 100 ರೂಪಾಯಿ ನಾಣ್ಯ, ಕರ್ಣಾಟಕ ಬ್ಯಾಂಕ್ ನ ಪೋಸ್ಟಲ್ ಸ್ಟ್ಯಾಂಪ್ ಅನಾವರಣ ಮತ್ತು ಲೋಕಾರ್ಪಣೆ, ಹಾಗೂ ಹದಿನೈದು ನೂತನ ಶಾಖೆ ಮತ್ತು ವೆಬ್ ಸೈಟ್ ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯ ಮಂತ್ರಿ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಸೇವೆ ಅಮೋಘ ಆದ್ರೆ ಅದನ್ನು ಉಳಿಸಿಕೊಂಡಿಲ್ಲ ಆದೇನೆ ಆಗಲಿ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆ ಇನ್ನಷ್ಟು ಸಂಭ್ರಮಾಚರಣೆ ಮಾಡಲಿ.

ಈ ಬ್ಯಾಂಕ್ ಅನ್ನು ನಮ್ಮ ಬ್ಯಾಂಕ್ ಆಗಿ ಉಳಿಸಿ ಇತರ ಬ್ಯಾಂಕ್ ಗಳನ್ನು ನಮ್ಮ ಕರ್ಣಾಟಕ ಬ್ಯಾಂಕ್ ನೊಂದಿಗೆ ವಿಲೀನ ಮಾಡಿಸುವ ಕಾರ್ಯ ನಮ್ಮಿಂದಾಗಲಿ.ಕರ್ಣಾಟಕ ಬ್ಯಾಂಕಿಗೆ ಸರ್ಕಾರದಿಂದ ಯಾವ ರೀತಿ ಸಹಕಾರ ಬೇಕಿದ್ರು ನೀಡೋಕೆ ಸಿದ್ದ ಎಂದರು. ಕಾರ್ಯಕ್ರಮದಲ್ಲಿ ಮಾತಾಡಿದ ಅಟರ್ನಿ ಜನ್ರಲ್ ಫೋರ್ ಇಂಡಿಯಾ ಆರ್. ವೆಂಕಟರಮಣಿ ಮಾತನಾಡಿ ಕರ್ಣಾಟಕ ಬ್ಯಾಂಕ್ ನೀಡುತ್ತಿರುವ ಅಭೂತಪೂರ್ವ ಸೇವೆಯನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ ಈ ಸಂಸ್ಥೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಓ ಶ್ರೀಕೃಷ್ಣಣ್ ಹೆಚ್, ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಬ್ಯಾಂಕ್ ನ ಅಧ್ಯಕ್ಷರಾದ ಪಿ. ಪ್ರದೀಪ್ ಕುಮಾರ್, ಕರ್ನಾಟಕ ವೃತ್ತ ಹಿರಿಯ ಪೋಸ್ಟ್‌ ಮಾಸ್ಟರ್ ಜನ್ರಲ್ ಎಸ್ ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳೂರಿನ ಪಂಪ್‌ವೆಲ್‌ನಲ್ಲಿ  ಭಾನುವಾರ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಭವನವನ್ನು ಉದ್ಘಾಟಿಸಿದರು. ಭಾರತದ ಅಟಾರ್ನಿ ಜನರಲ್ ವೆಂಕಟರಮಣಿ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್, ಬ್ಯಾಂಕ್ ಛೇರ್ಮನ್ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *