Connect with us

  DAKSHINA KANNADA

  ಮಂಗಳೂರು ಜೆರೋಸಾ ಶಾಲಾ ಪ್ರಕರಣ, ಬಿಜೆಪಿ ಶಾಸಕ, ಹಿಂದೂ ಸಂಘಟನೆಯ ಪ್ರಮುಖರ ಮೇಲೆ FIR ಖಂಡಿಸಿ ವಿಹೆಚ್‌ ಪಿಯಿಂದ ನಗರದಲ್ಲಿ ರಸ್ತೆತಡೆ ..!

  ಮಂಗಳೂರು : ಮಂಗಳೂರು ನಗರದ ಜೆರೋಸಾ ಸ್ಕೂಲ್ ವಿವಾದ ದಿನದಿಂದ ವಿಕೋಪಕ್ಕೆ ಹೋಗುತ್ತಿದ್ದು ಮಧ್ಯ ಪ್ರವೇಶ ಮಾಡಿದ್ದ ಬಿಜೆಪಿ ಶಾಸಕರು, ಹಿಂದೂ ಸಂಘಟನೆಯ ಪ್ರಮುಖರ ಮೇಲೆ ಜಿಲ್ಲಾಡಳಿತ FIR ದಾಖಲು ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಮಂಗಳೂರು ನಗರದಲ್ಲಿ ಡಿಡೀರ್ ರಸ್ತೆ ತಡೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.


  ಕೂಡಲೇ ಜಾಗೃತರಾದ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಜೆರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ, ಭರತ್ ಶೆ್ಟ್ಟಿ, ವಿಹೆಚ್‌ಪಿ ಮುಖಂಡ ಶರಣ್ ಪಂಪ್ವೆಲ್, ಪಾಲಿಕೆಯ ಸದಸ್ಯರುಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

  ಜಿಲ್ಲಾಡಳಿತ ಮತ್ತು ಮಂಗಳೂರು ಪೊಲೀಸರ ಕ್ರಮ ಖಂಡಿಸಿ ಇಂದು ನಗರದಲ್ಲಿ ವಿಹೆಚ್‌ಪಿ ಹರತಾಳಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಬಳಿ ನೂರಾರು ಬಜರಂಗದಳ ಮತ್ತು ವಿಹೆಚ್‌ಪಿ ಕಾರ್ಯಕರ್ತರು ಸೇರಿದ್ದರು .

  ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿದ್ದರು. ಆದ್ರೆ ಕಾರ್ಯಕರ್ತರು ಡೀಡೀರ್ ರಸ್ತೆ ತಡೆಗೆ ಮುಂದಾದರು, ಇದಕ್ಕೆ ಪೊಲೀಸರು ಅವಕಾಶ ನೀಡದ ಕಾರಣ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಜಟಾಪಟಿ ನಡೆಯಿತು. ಜೈ ಶ್ರೀ ರಾಂ ಘೋಷಣೆಯೊಂದಿಗೆ ಕಾರ್ಯಕರ್ತರು ಮುನ್ನಗ್ಗಲು ಯತ್ನಿಸಿದಾಗ ಕೂಡಲೇ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

  ಈ ಬಗ್ಗೆ ಹೇಳಿಕೆ ನೀಡಿರುವ  ವಿಹೆಚ್‌ಪಿ ನಾಯಕ ಶರಣ್ ಪಂಪ್‌ವೆಲ್  ಶ್ರೀರಾಮನ ಅಪಮಾನ ಮಾಡಿದವರ ವಿರುದ್ಧ ಕ್ರಮ ತೆಗದು ಕೊಳ್ಳಲು ಮತ್ತು ಜೈ ಶ್ರೀರಾಮ ಕೂಗಿದವರ ಮೇಲೆ ಹಾಕಿದ ಕೇಸನ್ನು ವಾಪಾಸ್ ಪಡೆಯಲು ಆಗ್ರಹಿಸಿ ಪ್ರತಿಭಟಿಸುತಿದ್ದ ಕಾರ್ಯಕರ್ತರನ್ನು ಬಂಧಿಸಿದ ಜಿಲ್ಲಾ ಆಡಳಿತದ ಕ್ರಮವನ್ನು ನಾನು ಖಂಡಿಸುತ್ತೇನೆ . ತಕ್ಷಣ ಶಿಕ್ಷಕಿ ಪ್ರಭಾರವರ ಮೇಲೆ ಕೇಸು ದಾಖಲಿಸಿ ಕ್ರಮ ತೆಗೆದುಕೊಳ್ಳಿ ಇಲ್ಲದಿದ್ದಲ್ಲಿ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೆವೆ ಎಂದಿದ್ದಾರೆ.

   

   

  Share Information
  Advertisement
  Click to comment

  You must be logged in to post a comment Login

  Leave a Reply